ನೈಸರ್ಗಿಕ ಆರೋಗ್ಯ ಕ್ರಮದ ಮೂಲಕ ಕೋವಿಡ್-19 ಸೋಂಕಿಗೆ ತಡೆ

ನೈಸರ್ಗಿಕ ಆರೋಗ್ಯ ಕ್ರಮದ ಮೂಲಕ ಕೋವಿಡ್-19 ಸೋಂಕಿಗೆ ತಡೆ

ನೈಸರ್ಗಿಕ ಆರೋಗ್ಯ ಕ್ರಮದ ಮೂಲಕ ಮಹಾಮಾರಿ ಕೋವಿಡ್ 19 ಸೋಂಕನ್ನು ತಡೆಗಟ್ಟಬಹುದು. ನೈಸರ್ಗಿಕ ಆರೋಗ್ಯ ಕ್ರಮಗಳಿಂದ ಯಾವ ರೀತಿಯ ಪ್ರಯೋಜನಗಳಾಗುತ್ತಿವೆ ಎಂಬುದರ ಬಗ್ಗೆ ಪ್ರಖ್ಯಾತ ನ್ಯಾಚುರೋಪತಿ ವೈದ್ಯರಾದ ಡಾ. ಅರುಣ್ ಶರ್ಮಾ ಅವರು ಕಾರ್ಯಾಗಾರದ ಮೂಲಕ ಮಾಹಿತಿಯನ್ನು ನೀಡಲಿದ್ದಾರೆ. ಅಕ್ಟೋಬರ್ 29ರಿಂದ ನವೆಂಬರ್ 4ವರೆಗೆ ಬೆಂಗಳೂರಿನ ದೇವನಹಳ್ಳಿಯ ಐವಿಸಿ ರಸ್ತೆ ಬಳಿ ಇರೋ ಸ್ಕೂಲ್ ಆಫ್ ಏನ್ಶಿಯೆಂಟ್ ವಿಸ್ಡಮ್ ಆವರಣದಲ್ಲಿ ಐದು ದಿನಗಳ ಕಾಲ ಈ ಕಾರ್ಯಾಗಾರ ನಡೆಯಲಿದೆ.

ಕಾರ್ಯಾಗಾರದಲ್ಲಿ ಕೋವಿಡ್ 19 ಸೋಂಕನ್ನು ನೈಸರ್ಗಿಕ ಆರೋಗ್ಯ ಕ್ರಮಗಳ ಮೂಲಕ ಯಾವ ರೀತಿ ತಡೆಗಟ್ಟಬಹುದು ಹಾಗೂ ಅದರಿಂದ ಆಗುವಂತಹ ಪ್ರಯೋಜನಗಳು ಏನು ಎಂಬುದರ ಮಾಹಿತಿ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಕಾರ್ಯಾಗಾರ ಮತ್ತು ಸಂವಾದದಲ್ಲಿ ಡಾ. ಅರುಣ್ ಶರ್ಮಾ ಅವರು, ನೈಸರ್ಗಿಕ ಆರೋಗ್ಯ ವಿಧಾನಗಳನ್ನು ಏಕೆ ಅನುಸರಿಸಬೇಕು ? ನಿಸರ್ಗದತ್ತವಾದ ಶಕ್ತಿಯ ವಿಜ್ಞಾನದ ಕುರಿತು ಅರಿವು ಮೂಡಿಸುವುದು, ಕೋವಿಡ್ 19ನಿಂದ ಸುರಕ್ಷಿತವಾಗಿರಲು ಪ್ರತಿಯೊಬ್ಬರೂ ಪಾಲಿಸಬಹುದಾದ ಐದು ಸರಳ ಮತ್ತು ಪ್ರಭಾವೀ ಕ್ರಮಗಳ ಕುರಿತು ಸಂಕ್ಷಿಪ್ತ ವಿವರಣೆಯನ್ನು ನೀಡಲಿದ್ದಾರೆ. ಹಾಗೇ ಏಳು ಪ್ರಭಾವೀ ರಹಸ್ಯಗಳು ಮತ್ತು ಐದು ನೈಸರ್ಗಿಕ ವಿಧಾನಗಳ ಕುರಿತು ಇರುವ ಐದು ಮೂಢನಂಬಿಕೆಗಳು ಏನು ಎಂಬುದರ ಮಾಹಿತಿಯನ್ನು ನೀಡಲಿದ್ದಾರೆ. ನೈಸರ್ಗಿಕ ಕ್ರಮಗಳನ್ನು ಬಳಸಿ ಕ್ಷಿಪ್ರಗತಿಯಲ್ಲಿ ಕೋವಿಡ್ 19ನಿಂದ ಪಾರಾದ ರೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ನಂತರ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದ್ದಾರೆ.
ನಿಮಗೆಲ್ಲಾ ತಿಳಿದಿರುವಂತೆ, ನೈಸರ್ಗಿಕ ಆರೋಗ್ಯ ಕ್ರಮಗಳು ಬಹಳ ಪುರಾತನವಾದ ವಿಧಾನಗಳು. ಭಾರತದಲ್ಲಿ ಸನಾತನ ಕಾಲದಿಂದಲೂ ಬಳಕೆಯಲ್ಲಿರುವ ಈ ವಿಧಾನಗಳನ್ನು ಹಳೆಯ ತಾಳೆಗರಿಗಳಲ್ಲಿ ಬರೆದಿಡಲಾಗಿದೆ. ನೈಸರ್ಗಿಕ ಆರೋಗ್ಯ ಪದ್ಧತಿಯ ಪಿತಾಮಹ ಎಂದೇ ಪರಿಗಣಿಸಲ್ಪಡುವ ಆಚಾರ್ಯ ಲಕ್ಷ್ಮಣ ಶರ್ಮಾ ಅವರ ವಂಶದ ಕುಡಿಯಾಗಿರುವ ಡಾ.ಅರುಣ್ ಶರ್ಮಾ ಅವರೂ ಸಹ ನೈಸರ್ಗಿಕ ಆರೋಗ್ಯ ಪದ್ಧತಿಯಲ್ಲಿ ಪಾರಂಗತರು ಹಾಗೂ ಲಕ್ಷ್ಮಣ ಶರ್ಮಾ ಅವರ ಮಾರ್ಗದಲ್ಲಿಯೇ ನಡೆದುಬಂದವರು.

ಐಎಂಎಎನ್‍ಹೆಚ್(ಇಮಾನಾಹ್) ನಲ್ಲಿ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳದೇ ಆರೋಗ್ಯವಂತರಾಗಿರುವ ಕ್ರಮವನ್ನು ಎಲ್ಲರಿಗೂ ತಿಳಿಸಿಕೊಡುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ನೈಸರ್ಗಿಕ ಆರೋಗ್ಯ ಕ್ರಮದಲ್ಲಿರುವ ವಿಜ್ಞಾನ ಮತ್ತು ಕಲೆಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಈ ಕಾರ್ಯಾಗಾರದಲ್ಲಿ ಮಾಡಲಾಗುತ್ತಿದೆ. ಕಳೆದ 38 ವರ್ಷಗಳಲ್ಲಿ ಐಎಂಎಎನ್‍ಹೆಚ್ ನೂರಕ್ಕೂ ಹೆಚ್ಚು ಸಾರ್ವಜನಿಕ ಉಪನ್ಯಾಸಗಳು, ತರಗತಿಗಳು, ಸೆಮಿನಾರ್ ಗಳು, ವೆಬಿನಾರ್ ಗಳು, ವಾರಾಂತ್ಯದ ಕಾರ್ಯಕ್ರಮಗಳು ಮತ್ತು ಭಾರತ ಮತ್ತು ಅಮೇರಿಕಾದ ಹಲವೆಡೆ 7 ದಿನಗಳ ಶಿಬಿರಗಳನ್ನೂ ಆಯೋಜಿಸಿಕೊಂಡು ಬಂದಿದೆ.

ಸಾವಿರಾರು ಜನ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳದೇ ಕೇವಲ ನೈಸರ್ಗಿಕ ಆರೋಗ್ಯ ವಿಧಾನಗಳನ್ನು ಅನುಸರಿಸುವ ಮೂಲಕ ತಮ್ಮ ಅನೇಕ ವರ್ಷಗಳ ಖಾಯಿಲೆಯಿಂದ ಮುಕ್ತರಾಗಿದ್ದಾರೆ. ಇದು ಆರೋಗ್ಯವಂತರಾಗಿರುವ ಇನ್ನೊಂದು ನೈಸರ್ಗಿಕ ವಿಧಾನ.
ನೈಸರ್ಗಿಕ ಸ್ವಚ್ಛತೆ ಸಂಪೂರ್ಣವಾಗಿ ಸರಳ, ಆರ್ಥಿಕವಾಗಿಯೂ ಸುಲಭ, ಸುರಕ್ಷಿತವಾದ ವೈಜ್ಞಾನಿಕ ವಿಧಾನವಾಗಿದೆ. ಇದು ಇತ್ತೀಚಿನ ದಿನಗಳ ಅಗತ್ಯವೂ ಹೌದು.
ನೈಸರ್ಗಿಕ ಅರೋಗ್ಯ ಕ್ರಮಗಳ ಕುರಿತು ತಿಳಿದುಕೊಂಡು ಅವುಗಳನ್ನು ಅನುಸರಿಸಿ ಹೊಸರೀತಿಯ ಅನುಭವ ಪಡೆಯಲಿಚ್ಛಿಸುವ, ಸ್ವತಃ ಇದರ ಪ್ರಭಾವಕಾರೀ ಅಂಶಗಳನ್ನು ಅರಿಯುವ ಆಸಕ್ತಿಯುಳ್ಳವರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಈ ಶಿಬಿರವು 50 ಅಭ್ಯರ್ಥಿಗಳಿಗೆ ಸೀಮಿತವಾಗಿದೆ. ಶಿಬಿರಾರ್ಥಿಗಳು ಭಾರತ ಸರ್ಕಾರದಿಂದ ಜಾರಿಯಾದ ಸಾಮಾಜಿಕ ಅಂತರದಂತಹ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸ್ಕೂಲ್ ಆಫ್ ಏನ್ಶಿಯೆಂಟ್ ವಿಸ್ಡಮ್
ಈವಿಸಿ ರಸ್ತೆ, ದೇವನಹಳ್ಳಿ, ಬೆಂಗಳೂರು-562 110
ದಿನಾಂಕ- 29 ಅಕ್ಟೋಬರ್ ನಿಂದ ನವೆಂಬರ್ 4, 2020ರವರೆಗೆ
ಹೆಚ್ಚಿನ ಮಾಹಿತಿಗಾಗಿ – 94487 10000

 

Leave a Reply

Your email address will not be published. Required fields are marked *