ರಾಷ್ಟ್ರಪ್ರಶಸ್ತಿ ವಿಜೇತ ʻಬಾಬಿ ಸಿಂಹʻ ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್ ಲುಕ್ ರಿಲೀಸ್.
ರಾಷ್ಟ್ರಪ್ರಶಸ್ತಿ ವಿಜೇತ ʻಬಾಬಿ ಸಿಂಹʻ ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್ ಲುಕ್ ರಿಲೀಸ್.
ಬಾಬಿ ಸಿಂಹ ರ ಜನ್ಮದಿನದ ಸಂದರ್ಭದಲ್ಲಿ ವಸಂತ ಕೋಕಿಲ ಫಸ್ಟ್ ಲುಕ್ ರಿಲೀಸ್ ಮಾಡಿದ ನಟ ರಕ್ಷಿತ್ ಶೆಟ್ಟಿ.
ಎಸ್ ಆರ್ ಟಿ ಎಂಟರ್‌ಟೈನ್‌ಮೆಂಟ್ಸ್, ಮುದ್ರ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಜಂಟಿಯಾಗಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಾಬಿ ಸಿಂಹ ನಾಯಕನಟರಾಗಿ ನಿರ್ಮಾಣವಾಗುತ್ತಿರುವ ತ್ರಿಭಾಷಾ ಚಿತ್ರ ವಸಂತ ಕೋಕಿಲ.
ರಾಮ್ ತಳ್ಲೂರಿ ಚಿತ್ರದ ನಿರ್ಮಾಪಕರಾಗಿದ್ದು, ರಮಣನ್ ಪುರುಷೋತ್ತಮ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾಬಿ ಸಿಂಹಗೆ ಜೋಡಿಯಾಗಿ ನಟಿ ಕಾಶ್ಮೀರ ಪರ್ದೇಶಿ ಅಭಿನಯಿಸುತ್ತಿದ್ದಾರೆ.
ನವೆಂಬರ್ 6 ರಂದು ಬಾಬಿ ಸಿಂಹ ಜನ್ಮದಿನದ ಪ್ರಯುಕ್ತ ಖ್ಯಾತ ನಟ ರಕ್ಷಿತ್ ಶೆಟ್ಟಿ ಈ ಚಿತ್ರದ ಟೈಟಲ್ ವಸಂತ ಕೋಕಿಲ ಅನೌನ್ಸ್ ಮಾಡೋದ್ರ ಜೊತೆಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಫಸ್ಟ್ ಲುಕ್ ರಿಲೀಸ್ ಮಾಡಿದ್ರು.
ಇದೇ ವೇಳೆ ತೆಲುಗು ಭಾಷೆಯ ಫಸ್ಟ್‌ಲುಕ್‌ನ್ನ ಬಾಹುಬಲಿ ಖ್ಯಾತಿಯ ರಾಣಾ ಹಾಗೂ ತಮಿಳು ಭಾಷೆಯ ಫಸ್ಟ್‌ಲುಕ್ ಪೋಸ್ಟರ್‌ನ್ನ ಖ್ಯಾತ ನಟ ಧನುಷ್ ಆನ್‌ಲೈನ್ ಮೂಲಕವೇ ರಿಲೀಸ್ ಮಾಡಿದ್ರು.
ರೋಮ್ಯಾಂಟಿಕ್ ಥ್ರಿಲಕ್ ಜಾನರ್‌ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಇದೀಗ ಬಿಡುಗಡೆಗೊಂಡಿರೋ ಫಸ್ಟ್‌ಲುಕ್ ನಲ್ಲಿ ಬಾಬಿ ಸಿಂಹ ವಿಭಿನ್ನ ರೀತಿಯಲ್ಲಿ ಕಾಣುವಂತೆ ಕೈಯಲ್ಲಿ ಕ್ರಾಸ್ ಬೌ, ಫಾರೆಸ್ಟ್ ಬ್ಯಾಕ್‌ಡ್ರಾಪ್, ಡಾರ್ಕ್ ಗ್ರೀನ್ ಕಲರ್ ಟೆಂಟ್ ಹೀಗೆ ಬಹಳಷ್ಟು ಕುತೂಹಲಕಾರಿ ಅಂಶಗಳಿವೆ.
ಬಾಬಿ ಸಿಂಹ ಹಾಗೂ ನಿರ್ದೇಶಕ ರಮಣನ್ ಕಾಂಬಿನೇಶನ್‌ನಲ್ಲಿ ಈ ಚಿತ್ರ ಅದ್ಭುತವಾಗಿ ಮೂಡಿಬರುತ್ತಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಥಿಂಕ್ ಮ್ಯೂಸಿಕ್ ಈ ಚಿತ್ರದ ಆಡಿಯೋ ಹಕ್ಕುಗಳನ್ನ ಹೊಂದಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಮತ್ತಷ್ಟು ವಿಷಯಗಳನ್ನ ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆಗೊಳಿಸುವುದಾಗಿ ನಿರ್ಮಾಪಕ ರಾಮ್ ತಳ್ಲೂರಿ ತಿಳಿಸಿದ್ದಾರೆ.