ʻಪುಷ್ಪʼ ಅಬ್ಬರಕ್ಕೆ RRR, ರಾಧೆಶ್ಯಾಮ್, ಬಾಹುಬಲಿ ದಾಖಲೆಗಳು ಉಡೀಸ್.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆಗಳನ್ನೇ ಬರೆಯುತ್ತಿದೆ. ʻಪುಷ್ಪʼ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲೇ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, ಪ್ರಭಾಸ್ ಅಭಿನಯದ ರಾಧೆಶ್ಯಾಮ್ ಮತ್ತು ಬಾಹುಬಲಿ ಸಿನಿಮಾಗಳ ಆಲ್ ಟೈಮ್ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಮೈತ್ರಿಮೂವಿ ಮೇಕರ್ಸ್ ನಿರ್ಮಾಣದಲ್ಲಿ ಬರ್ತಿರೋ ʻಪುಷ್ಪʼ ಚಿತ್ರದ ಕ್ರೇಜ್ ಕಂಡು ದಕ್ಷಿಣ ಭಾರತದ ಚಿತ್ರರಂಗವಷ್ಟೇ ಅಲ್ಲ ಬಾಲಿವುಡ್ ಸಹ ನಿಬ್ಬೆರಗಾಗಿದೆ. ʻತಗ್ಗೆಧೇ ಲೇʼ ಎಂದು ಮುನ್ನುಗುತ್ತಿರೋ ಪುಷ್ಪರಾಜ್ ಈಗಾಗಲೇ ಟಾಲಿವುಡ್ ನಿಂದ ಬಂದಿದ್ದ ಪ್ಯಾನ್ ಇಂಡಿಯಾ ಮೂವಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ದಾಖಲೆಗಳನ್ನೆಲ್ಲಾ ಅಳಿಸಿಹಾಕಿ ಹೊಸ ದಾಖಲೆಗಳನ್ನೇ ಸೃಷ್ಟಿಸುತ್ತಿದ್ದಾನೆ.
ಯುಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂ.1 ಆಗಿರೋ ಪುಷ್ಪ ರಿಲೀಸ್ ಆದ ಕೇವಲ 24 ಗಂಟೆಗಳಲ್ಲೇ 25 ಮಿಲಿಯನ್ ವೀವ್ಸ್ ಹಾಗೂ 792 ಸಾವಿರ ಲೈಕ್ಸ್ ಪಡೆದು ದಾಖಲೆ ಸೃಷ್ಟಿಸಿದೆ. ಈಗಾಗಲೇ 35 ಮಿಲಿಯನ್ ವೀವ್ಸ್ ಹಾಗೂ 1 ಮಿಲಿಯನ್ ಲೈಕ್ಸ್ ಗಳಿಸಿ ಮುನ್ನುಗುತ್ತಿದೆ.