ಆಮೆ, ಮೊಲ ಮತ್ತು ಕುರಿ..! ರೇಸ್‌ನಲ್ಲಿ ಗೆಲ್ಲೋದು ಯಾರು..?

ಆಮೆ, ಮೊಲ ಮತ್ತು ಕುರಿ..! ರೇಸ್‌ನಲ್ಲಿ ಗೆಲ್ಲೋದು ಯಾರು..?

ನಿಮಗೆಲ್ಲಾ ಆಮೆ ಮತ್ತು ಮೊಲದ ಕತೆ ಗೊತ್ತೇ ಇರುತ್ತೆ. ಆದ್ರೆ ಈ ಕತೆಗೆ ಹೊಸ ಟ್ವಿಸ್ಟ್‌ ಈಗ ಸಿಗೋದಿದೆ. ಆಮೆ ಮತ್ತು ಮೊಲದ ರೇಸ್‌ನಲ್ಲಿ ಈ ಸಲ ಯಾರು ಗೆಲ್ಲುತ್ತಾರೆ ಅನ್ನೋದರ ಬಗ್ಗೆ ಈಗಾಗಲೇ ಭಾರಿ ಚರ್ಚೆಯೇ ಆಗ್ತಿದೆ. ಇದ್ಯಾವುದಪ್ಪಾ, ಹೊಸ ರೇಸ್‌ ಅಂತೀರಾ… ನಾವು ಹೇಳ್ತಿರೋದು ಬಿಗ್‌ ಬಾಸ್‌ ಮನೆಯ ಆಮೆ ಮತ್ತು ಮೊಲದ ರೇಸ್‌ ಬಗ್ಗೆ. ಈ ರೇಸ್‌ ನಲ್ಲಿ ಕುರಿ ಎಂಟ್ರಿಯೇ ಹೊಸ ಟ್ವಿಸ್‌.
ಬಿಗ್‌ ಬಾಸ್‌ ಸೀಸನ್‌ ಸೆವನ್‌ ನಲ್ಲಿ ಆಪ್ತಮಿತ್ರರು ಅಂದ್ರೆ ಅದು ಶೈನ್‌ಶೆಟ್ಟಿ ಮತ್ತು ವಾಸುಕಿ ವೈಭವ್‌. ಮೊದಲನೇ ವಾರದಿಂದ ಇವತ್ತಿನವರೆಗೂ ಇಬ್ಬರ ನಡುವಿನ ಬಾಂಧವ್ಯ ಹಾಗೇ ಇದೆ. ಆದ್ರೆ ಇದು ಬಿಗ್‌ ಬಾಸ್‌ ಮನೆ. ಇಲ್ಲಿ ಆಟ ಆಡೋವಾಗ ಯಾರೂ ಮಿತ್ರರಲ್ಲ, ಯಾರು ಶತ್ರುವೂ ಅಲ್ಲ. ಗೆಲ್ಲೋದೊಂದೇ ಗುರಿ. ಗೆದ್ದವರಿಗೆ ಮಾತ್ರ ಸತ್ಕಾರ. ಇದು ಈ ಇಬ್ಬರು ಗೆಳೆಯರಿಗೂ ಗೊತ್ತೇ ಇದೆ. ಈ ಬಿಗ್‌ ಬಾಸ್‌ ರೇಸ್‌ ನಲ್ಲಿ ತಾವು ಸದಾ ಮುಂದಿರಲು ಎಲ್ಲಾ ಟಾಸ್ಕ್‌ ಗಳಲ್ಲಿ 100 % ಎರ್ಫಟ್‌ ಹಾಕ್ತಾರೆ. ಈ ಇಬ್ಬರ ಬಗ್ಗೆ ಮನೆಯಲ್ಲಿ ಒಂದು ಮಾತಿದೆ ಆ ಬಗ್ಗೆ ಕಿಚ್ಚ ಸುದೀಪ್‌ ಸಹ ವೀಕೆಂಡ್‌ ಪಂಚಾಯ್ತಿ ವೇಳೆ ಮಾತನಾಡಿದ್ದಾರೆ. ಅದುವೇ ಆಮೆ ಮತ್ತು ಮೊಲ. ಇಬ್ಬರಲ್ಲಿ ಆಮೆ ಯಾರು ಮತ್ತು ಮೊಲ ಯಾರು ಅಂದ್ರೆ, ಇಲ್ಲಿ ವಾಸುಕಿ ಆಮೆ, ಶೈನ್‌ ಮೊಲ. ಮನೆಯಲ್ಲಿ ಬೆಳಗ್ಗೆ ಬರೋ ಹಾಡಿಗೆ ಡ್ಯಾನ್ಸ್‌ ಮಾಡೋದ್ರಿಂದ ಹಿಡಿದು ಲೈಟ್ಸ್‌ ಆಫ್‌ ಆದ ಮೇಲೂ ಯಾರದಾದ್ರೂ ಜೊತೆ ತಮಾಷೆ ಮಾಡ್ತಾ ಮಾತಾಡ್ತಾ ಆಕ್ಟೀವ್‌ ಆಗಿರ್ತಾರೆ ಶೈನ್‌ ಶೆಟ್ಟಿ. ಆದ್ರೆ ವಾಸುಕಿ ಇದಕ್ಕೆ ಸ್ವಲ್ಪ ಭಿನ್ನ. ಅವರ್ಯಾವತ್ತೂ ಬೆಳಗಿನ ಹಾಡಿಗೆ ಎದ್ದು ಡ್ಯಾನ್ಸ್‌ ಮಾಡೋದಿಲ್ಲ. ಈ ಬಗ್ಗೆ ಅವರ ತಾಯಿ ಮನೆಗೆ ಬಂದಾಗ ಮಾತನಾಡಿ ಡ್ಯಾನ್ಸ್‌ ಮಾಡುವಂತೆ ಹೇಳಿದ್ರು. ಇನ್ನು ಟಾಸ್ಕ್‌ ಅಂತ ಬಂದ್ರೆ, ವಾಸುಕಿ ಎತ್ತಿದ ಕೈ, ತನಗೆ ಎಷ್ಟೇ ಕಷ್ಟವಾದ್ರೂ ಬಿಟ್ಟುಕೊಡೋದೆ ಇಲ್ಲ. ಈ ಸೀಸನ್‌ನಲ್ಲಿ ವಾಸುಕಿ ಇದ್ದ ಟೀಮ್‌ ಸೋತ ಉದಾಹರಣೆ ಕಡಿಮೆ. ಇದೇ ಕಾರಣಕ್ಕೆ ಶೈನ್‌ರನ್ನ ಮೊಲದಂತೆ ಆಕ್ಟೀವ್‌ ಇದ್ರೂ ರೇಸ್‌ (ನಿರ್ಣಾಯಕ ಘಟ್ಟ) ನಲ್ಲಿ ನಿದ್ದೆಗೆ ಜಾರಿ, ಆಮೆ ಗೆ ಅವಕಾಶ ಕೊಟ್ಟುಬಿಟ್ಟೀರಾ ಅಂತ ಎಚ್ಚರಿಸಲಾಗಿತ್ತು. ಕಳೆದ ವಾರ ಕಿಶನ್‌ ಮತ್ತು ಹರೀಶ್‌ ರಾಜ್‌ ಮಾತನಾಡುತ್ತಾ ಈ ಮೊಲ ಅಷ್ಟು ಸುಲಭವಾಗಿ ನಿದ್ದೆ ಜಾರೋದಿಲ್ಲ. ಆಮೆ ಮತ್ತು ಮೊಲದ ರೇಸ್‌ನಲ್ಲಿ ಯಾರು ಗೆಲ್ಲಬಹುದು ಅಂತ ಮಾತನಾಡಿಕೊಂಡಿದ್ರು.
ಬಿಗ್‌ ಬಾಸ್‌ ಮನೆಯ 14 ನೇ ವಾರ ಮನೆಯ ಎಲ್ಲಾ ಸದಸ್ಯರು ನಾಮಿನೇಟ್‌ ಆದಾಗ ಕ್ಯಾಪ್ಟನ್‌ ಆದವರಿಗೆ ಇಮ್ಯುನಿಟಿ ಸಿಗೋದಿತ್ತು. ಆ ಸದಾವಕಾಶವನ್ನ ಬಳಸಿಕೊಂಡು ಕ್ಯಾಪ್ಟನ್‌ ಆಗೋ ಮೂಲಕ ಇಮ್ಯುನಿಟಿ ಪಡೆದು ಡಬಲ್‌ ಎಲಿಮಿನೇಶನ್‌ ಟೈಂನಲ್ಲಿ ಸೇಫ್‌ ಝೋನ್‌ಗೆ ಹೋಗಿ ನಿಂತಿದ್ರು ಶೈನ್‌. ಯಾವ ಟೈಂನಲ್ಲಿ ಗೆಲ್ಲುತ್ತೇವೆ ಅನ್ನೋದು ಬಹಳ ಮುಖ್ಯವಾಗುತ್ತೆ ಅಂತ ಪಂಚಾಯ್ತಿ ವೇಳೆ ಹೇಳಿದ ಸುದೀಪ್‌, ಫಿನಾಲೆಗೆ ಅತಿ ಸಮೀಪದ ಹಂತದಲ್ಲಿ ಈ ಗೆಲುವು ಪಡೆದ ಶೈನ್‌ಗೆ ಶಹಭಾಷೆ ಅಂದಿದ್ರು. ಅದಾದ ಮೇಲೆ 15 ನೇ ವಾರವೂ ಮನೆಯ ಎಲ್ಲಾ ಸದಸ್ಯರು ನಾಮಿನೇಟ್‌ ಆದ್ರು. ಈ ವೇಳೆ ಬಿಗ್‌ ಬಾಸ್‌ ಮನೆಯ ಸದಸ್ಯರಿಗೆ ನಾಮಿನೇಶನ್‌ನಿಂದ ಇಮ್ಯುನಿಟಿ ಪಡೆದು ನೇರವಾಗಿ ಫಿನಾಲೆಗೆ ತಲುಪೋ ಅವಕಾಶವನ್ನ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಮೂಲಕ ನೀಡಿದ್ರು. ಅತಿ ಹೆಚ್ಚು ಪದಕ ಪಡೆದು ವಾಸುಕಿ ಫಿನಾಲೆಗೆ ಮೊದಲ ಸ್ಪರ್ಧಿಯಾಗಿ ಟಿಕೆಟ್‌ ಪಡೆದುಕೊಂಡ್ರು. 14 ನೇ ವಾರ ಶೈನ್‌, 15 ನೇ ವಾರ ವಾಸುಕಿ ಹೀಗೆ ಒಬ್ಬರಾದ ಮೇಲೆ ಒಬ್ರು ಇಮ್ಯುನಿಟಿ ಪಡೆದುಕೊಂಡ್ರು. ಆದ್ರೆ ಫಿನಾಲೆಗೆ ನೇರ ಟಿಕೆಟ್‌ ಸಿಕ್ಕಿದ್ದು ವಾಸುಕಿಗೆ.
ವಾಸುಕಿ ವೈಭವ್‌ ಈಗಾಗಲೇ ಫಿನಾಲೆಗೆ ತಲುಪಿಯಾಗಿದೆ. ಅವರ ಜೊತೆಗೆ ಇನ್ನು ನಾಲ್ವರು ಸ್ಪರ್ಧಿಗಳು ಫಿನಾಲೆಯಲ್ಲಿ ಇರಲಿದ್ದಾರೆ. ಅವರು ಯಾರು ಅನ್ನೋದು ಇನ್ನೊಂದು ದಿನದಲ್ಲಿ ನಿರ್ಧಾರವಾಗಲಿದೆ. ಎಲ್ಲರ ಲೆಕ್ಕಾಚಾರದ ಪ್ರಕಾರ ಶೈನ್‌ ಶೆಟ್ಟಿ ಫಿನಾಲೆಯಲ್ಲಿ ಇರಲಿದ್ದಾರೆ. ಅವರಿಗೆ ಇದುವರೆಗೆ ನಾಮಿನೇಟ್‌ ಆದ ಪ್ರತಿಸಲ ಅತಿಹೆಚ್ಚು ವೋಟ್‌ಗಳು ಬಂದಿವೆ. ಆ ಲೆಕ್ಕಾಚಾರದ ಪ್ರಕಾರ ನೋಡಿದೆ ಶೈನ್‌ಶೆಟ್ಟಿ ಫಿನಾಲೆಯಲ್ಲಿರೋದು ಖಂಡಿತ. ಇನ್ನು ಉಳಿದ ಮೂವರಲ್ಲಿ ಕುರಿ ಪ್ರತಾಪ್‌ ಸಹ ಫಿನಾಲೆಗೆ ಹೋಗೋದು ಖಚಿತ ಅಂತಲೇ ಅಂದಾಜಿದೆ. ಯಾಕಂದ್ರೆ ಇವರಿಗೂ ನಾಮಿನೇಟ್‌ ಆದ ಪ್ರತಿಬಾರಿಯೂ ಹೆಚ್ಚು ವೋಟ್‌ಗಳು ಬಂದಿವೆ. ಇದರ ಆಧಾರದ ಮೇಲೆ ಈ ಮೂವರು ಸ್ಪರ್ಧಿಗಳು ಫಿನಾಲೆ ವಾರದ ಸ್ಪರ್ಧಿಗಳಾಗಿರೋದ್ರ ಬಗ್ಗೆ ಸದ್ಯಕ್ಕೆ ಯಾರಿಗೂ ಅನುಮಾನವಿಲ್ಲ. ಆದ್ರೆ ಇರುವ ಏಕೈಕ ಪ್ರಶ್ನೆ ಅಂದ್ರೆ ಈ ಮೂವರಲ್ಲಿ ಯಾರ ಕೈ ಸುದೀಪ್‌ ಮೇಲಕ್ಕೆ ಎತ್ತಿ ಟ್ರೋಫಿಯನ್ನ ನೀಡ್ತಾರೆ ಅನ್ನೋದು…
ಇಲ್ಲಿ ಹಳೆಯ ಕತೆಯಂತೆ ಆಮೆಯೇ ಈ ಬಾರಿಯೂ ಗೆಲುವು ಸಾಧಿಸುತ್ತಾ..? ಆಮೆಯಿಂದ ಈ ಹಿಂದೆ ಪಾಠ ಕಲಿತಿರೋ ಮೊಲ ಈ ಸಲ ಬುದ್ದಿವಂತಿಕೆ ಪ್ರರ್ದಶಿಸಿ, ನಿದ್ರೆಗೆ ಜಾರದೆ ರೇಸ್‌ನ್ನ ಪೂರ್ಣಗೊಳಿಸಿ ಗೆದ್ದು ಬೀಗುತ್ತಾ..? ಆಮೆ ಮತ್ತು ಮೊಲದ ರೇಸ್‌ ಮಧ್ಯೆ ಕುರಿ ಎಂಟ್ರಿ ಪಡೆದು ಎರಡಕ್ಕಿಂತ ಹೆಚ್ಚು ವೋಟ್‌ ಪಡೆದು ಟ್ರೋಫಿ ತನ್ನದಾಗಿಸಿಕೊಳ್ಳುತ್ತಾ..? ಯಾರಾಗ್ತಾರೆ ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಅನ್ನೋದು ಸದ್ಯದ ಕುತೂಹಲ…

 

Leave a Reply

Your email address will not be published. Required fields are marked *