ಕ್ರೇಜಿಯಾಗಿದೆ ಒಡೆಯರ್- ಇಶಾನ್ ರೇಮೊ ಮೋಷನ್ ಪೋಸ್ಟರ್..!!

ಕ್ರೇಜಿಯಾಗಿದೆ ಒಡೆಯರ್- ಇಶಾನ್ ರೇಮೊ ಮೋಷನ್ ಪೋಸ್ಟರ್..!!

ಸ್ಟೈಲಿಶ್ ಲುಕ್… ಮಾಸ್ ಕಿಕ್… ರಾಕಿಂಗ್ ಬೀಟ್ಸ್.. ಎಲ್ಲಾ ಸೇರಿ ಟ್ರೆಂಡಿಯಾಗಿ ಕಂಗೊಳಿಸ್ತಿರೋ ಮೋಷನ್ ಪೋಸ್ಟರ್.. ಎಲ್ಲಾ ಆಂಗಲ್ ನಿಂದ್ಲೂ ನಿರೀಕ್ಷೆ ಹುಟ್ಟಿಸ್ತಿರೋ ಮ್ಯಾಸೀವ್ ಪೋಸ್ಟರ್ ರೇಮೊ ಚಿತ್ರದ ಮೋಷನ್ ಪೋಸ್ಟರ್. ವಿಲನ್ ಅಂತಹ ಅತಿದೊಡ್ಡ ಬಜೆಟ್ ಸಿನಿಮಾ ಮಾಡಿದ್ದ ನಿರ್ಮಾಪಕರು, ಪವರ್ ಫುಲ್, ಸ್ಟೈಲಿಶ್ ಅಂಡ್ ಟ್ರೆಂಡಿ ಸಿನಿಮಾಗಳನ್ನ ಮಾಡಿರೋ ಡೈರೆಕ್ಟರ್, ಜೊತೆಗೆ ಮ್ಯಾಜಿಕಲ್ ಕಂಪೋಸರ್ ಜೊತೆಯಾಗಿ, ಇಶಾನ್ ಅಂತಹ ಆರಡಿ ಹ್ಯಾಡ್ಸಂ ಹುಡ್ಗ, ಅಶಿಕಾ ರಂಗನಾಥ್ ಅಂತಹ ಬ್ಯೂಟಿಫುಲ್ ಹೀರೋಯಿನ್ ಕಾಂಬಿನೇಷನ್ ಇರೋ ಸಿನಿಮಾ ರೇಮೊ. ಸೆಟ್ಟೇರಿದಾಗಿನಿಂದ್ಲೂ ಬಗೆಬಗೆಯಾಗಿ ಸದ್ದು ಸುದ್ದಿ ಮಾಡ್ತಿರೋ ಈ ಚಿತ್ರದ ಮೋಷನ್ ಪೋಸ್ಟರ್ ಇವತ್ತು ಲಾಂಚ್ ಆಗಿದೆ. ಹೊಸ ವರ್ಷದ ಪ್ರಯುಕ್ತ ಚಿತ್ರತಂಡ ಕನ್ನಡ ಸಿನಿಪ್ರಿಯರಿಗೆ ಶುಭಕೋರುತ್ತಾ, ತಮ್ಮ ಚಿತ್ರದ ಮೋಷನ್ ಪೋಸ್ಟರ್ ನ ರಿಲೀಸ್ ಮಾಡಿದೆ. ರೇಮೊ ಮೋಷನ್ ಪೋಸ್ಟರ್ ಸಖತ್ ಅಟ್ರ್ಯಾಕ್ಟೀವ್ ಆಗಿದೆ. ಫ್ರೆಶ ಆಗಿದೆ. ಟ್ರೆಂಡಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಎಬ್ಬಿಸೋ ಸೂಚನೆ ಕೊಡ್ತಿದೆ. ಸ್ಯಾಂಡಲ್ವುಡ್ ಗೆ ಮತ್ತೊಬ್ಬ ಮಾಸ್- ಕ್ಲಾಸ್ ಆಡಿಯನ್ಸ್ ನ ಸೆಳೆಯೋ ಮೋಸ್ಟ್ ಹ್ಯಾಡ್ಸಂ ಹೀರೋ ಸಿಗೋ ಸೂಚನೆ ಕೊಡ್ತಿದೆ. ಮೋಷನ್ ಪೋಸ್ಟರ್ ನಲ್ಲಿರೋ ಇಶಾನ್ ಲುಕ್ ತೆಲುಗಿನ ಪ್ರಿನ್ಸ್ ಮಹೇಶ್ ಬಾಬುರನ್ನ ನೆನಪಿಸ್ತಿದೆ. ಇನ್ನೂ ಅರ್ಜುನ್ ಜನ್ಯ ಬೀಟ್ಸ್ ಮತ್ತೊಂದು ಅದ್ಭುತ ಹಿಟ್ ಆಲ್ಬಂ ಕೊಡೋ ನಿರೀಕ್ಷೆ ಹುಟ್ಟಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗೂಗ್ಲಿ ಯಂತಹ ಮೆಗಾ ಹಿಟ್ ಸಿನಿಮಾ ಕೊಟ್ಟಿದ್ದ ಪವನ್ ಒಡೆಯರ್ ಮತ್ತೊಮ್ಮೆ ಅಂತಹ ದೊಡ್ಡ ಸಕ್ಸಸ್ ಕೊಡೋ ಭರವಸೆ ಹುಟ್ಟಿಸಿದ್ದಾರೆ.
ಅಂದ್ಹಾಗೆ ರೇಮೊ ಚಿತ್ರವನ್ನ ಜೈಯಾದಿತ್ಯ ಫಿಲಂಸ್ ಬ್ಯಾನರ್ ನಲ್ಲಿ ಅದ್ಧೂರಿ ಚಿತ್ರಗಳ ಸರದಾರ ಸಿ.ಆರ್ ಮನೋಹರ್ ಜೊತೆಗೆ ಸಿ.ಆರ್ ಗೋಪಿ ದುಬಾರಿ ನಿರ್ಮಾಣದಲ್ಲಿ ತಯಾರಾಗ್ತಿದೆ. ಸಿ.ಆರ್ ಮನೋಹರ್ ಮುದಗ್ದು ಸಹೋದರ ಇಶಾನ್ ಗಾಗಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ತುಂಬು ಸಿನಿಮೋತ್ಸಾಹದಲ್ಲಿ, ಈ ಚಿತ್ರವನ್ನ ತುಂಬಾ ಸ್ಪೆಷಲ್ ಆಗಿ ಪ್ರೆಸೆಂಟ್ ಮಾಡ್ತಿದ್ದಾರೆ. ಸದ್ಯ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸೆನ್ಸೇಷನ್ ಸೃಷ್ಟಿಸ್ತಿರೋ ಚಿತ್ರತಂಡ ಇಲ್ಲಿಂದ ಚಿತ್ರದ ಒಂದೊಂದು ವಿಶೇಷತೆಯನ್ನ ಹೇಳೋದ್ರ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದೆ.

 

Leave a Reply

Your email address will not be published. Required fields are marked *