ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಏ.9 ಕ್ಕೆ ಯುವರತ್ನ

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಏ.9 ಕ್ಕೆ ಯುವರತ್ನ

ಇತ್ತೀಚೆಗೆ ಬಿಡುಗಡೆಯಾದ, ಪುನೀತ್‌ ರಾಜ್‌ಕುಮಾರ್, ಪ್ರಕಾಶ್‌ ರಾಜ್‌ ಮತ್ತು ಧನಂಜಯ ನಟನೆಯ ಸಿನಿಮಾ ‘ಯುವರತ್ನ’ ಡಿಜಿಟಲ್‌ ಪ್ರೀಮಿಯರ್ ಆಗಲಿದೆ ಎಂದು ಅಮೆಜಾನ್‌ ಪ್ರೈಮ್ ವೀಡಿಯೋ ಘೋಷಿಸಿದೆ

ಸಂತೋಷ್‌ ಆನಂದರಾಮ್‌ ನಿರ್ದೇಶನದ ಹಾಗೂ ಹೊಂಬಾಳೆ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ವಿಜಯ್‌ ಕರಗಂದೂರು ನಿರ್ಮಾಣದ ಹಾಗೂ ಪುನೀತ್ ರಾಜ್‌ಕುಮಾರ್‌, ಸಯ್ಯೇಶಾ, ಸೋನು ಗೌಡ, ಧನಂಜಯ ಮತ್ತು ಪ್ರಕಾಶ್‌ ರಾಜ್‌ ನಟನೆಯ ಜನಪ್ರಿಯ ಸಿನಿಮಾ
ಭಾರತ ಮತ್ತು 240 ದೇಶಗಳಲ್ಲಿನ ಪ್ರೈಮ್ ಸದಸ್ಯರು ಯುವರತ್ನ ಸಿನಿಮಾವನ್ನು, ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದೇ ವಾರದಲ್ಲಿ ಅಮೆಜಾನ್‌ ಪ್ರೈಮ್ ವೀಡಿಯೋದಲ್ಲಿ 2021 ಏಪ್ರಿಲ್ 9 ರಿಂದ ವೀಕ್ಷಿಸಬಹುದು.

ಮುಂಬೈ, ಏಪ್ರಿಲ್ 8, 2021: ಕನ್ನಡ ಸಿನಿಮಾ ಯುವರತ್ನ ಎಕ್ಸ್‌ಕ್ಲೂಸಿವ್ ಡಿಜಿಟಲ್‌ ಪ್ರೀಮಿಯರ್ ಅನ್ನು ಅಮೆಜಾನ್‌ ಪ್ರೈಮ್ ವೀಡಿಯೋ ಇಂದು ಘೋಷಿಸಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಮಾನವೀಯ ಮೌಲ್ಯಗಳನ್ನುಳ್ಳ ವ್ಯಕ್ತಿಯ ಕಥೆಯೇ ಯುವರತ್ನ. ಸಂತೋಷ್‌ ಆನಂದರಾಮ್‌ ನಿರ್ದೇಶನದ ಹಾಗೂ ಹೊಂಬಾಳೆ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ವಿಜಯ್‌ ಕರಗಂದೂರು ನಿರ್ಮಾಣದ ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌, ಸಯ್ಯೇಶಾ, ಸೋನು ಗೌಡ, ಧನಂಜಯ ಮತ್ತು ಪ್ರಕಾಶ್‌ ರಾಜ್‌ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಭಾರತ ಮತ್ತು 240 ದೇಶಗಳಲ್ಲಿನ ಪ್ರೈಮ್ ಸದಸ್ಯರು ಯುವರತ್ನ ಸಿನಿಮಾವನ್ನು, ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದೇ ವಾರದಲ್ಲಿ ಅಮೆಜಾನ್‌ ಪ್ರೈಮ್ ವೀಡಿಯೋದಲ್ಲಿ 2021 ಏಪ್ರಿಲ್ 9 ರಿಂದ ವೀಕ್ಷಿಸಬಹುದು.
ರಾಜಕೀಯದಿಂದಾಗಿ ಖಾಸಗೀಕರಣಕ್ಕೀಡಾಗಿ ಮುಚ್ಚುತ್ತಿರುವ ಪ್ರತಿಷ್ಠಿತ ಕಾಲೇಜಿನ ಕಥೆ ಯುವರತ್ನ. ವಿಶ್ವವಿದ್ಯಾಲಯದ ಪ್ರಿನ್ಸಿಪಾಲ್‌ ಖಾಸಗೀಕರಣದ ವಿರುದ್ಧ ಪ್ರತಿಭಟಿಸುತ್ತಾರೆ ಮತ್ತು ರಾಷ್ಟ್ರಕೂಟ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಸೇರುವ ಅರ್ಜುನ್‌ (ಪುನೀತ್‌ ರಾಜ್‌ಕುಮಾರ್) ಖಾಸಗೀಕರಣದ ವಿರೋಧಕ್ಕೆ ಬೆಂಬಲ ನೀಡುತ್ತಾರೆ. ಮುಂದೇನಾಗುತ್ತದೆ? ಅವರ ಹೋರಾಟದಲ್ಲಿ ಯಶಸ್ವಿಯಾಗುತ್ತಾರೆಯೇ? ಈ ಜನಪ್ರಿಯ ಸಿನಿಮಾ ಯುವರತ್ನ ಏಪ್ರಿಲ್ 9 ರಿಂದ ಅಮೆಜಾನ್‌ ಪ್ರೈಮ್ ವೀಡಿಯೋದಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದೆ.

ಅಮೆಜಾನ್‌ ಪ್ರೈಮ್ ವೀಡಿಯೋದ ಕಂಟೆಂಟ್‌ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ವಿಜಯ್‌ ಸುಬ್ರಮಣ್ಯನ್‌ ಮಾತನಾಡಿ “ವಿವಿಧ ಜಾನರ್ ಮತ್ತು ಭಾಷೆಯಲ್ಲಿ ಉತ್ತಮ ಕಂಟೆಂಟ್ ಒದಗಿಸಲು ಅತ್ಯುತ್ತಮ ಸಿನಿಮಾ ನಿರ್ಮಾತೃಗಳ ಜೊತೆಗೆ ಸಹಭಾಗಿತ್ವ ವಹಿಸಲು ಅಮೆಜಾನ್ ಪ್ರೈಮ್ ವೀಡಿಯೋ ಎಂದಿಗೂ ಬದ್ಧವಾಗಿದೆ ಮತ್ತು ಹೊಂಬಾಳೆ ಫಿಲಂಸ್‌ ಜೊತೆಗೆ ಸಂಬಂಧವನ್ನು ಮುಂದುವರಿಸಲು ನಮಗೆ ಹೆಮ್ಮೆಯಾಗುತ್ತಿದೆ. ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಈಗಾಗಲೇ ನಿರೀಕ್ಷೆಯಲ್ಲಿರುವ ಕನ್ನಡ ಸಿನಿಮಾಗಳ ಪಟ್ಟಿಗೆ ಯುವರತ್ನ ಉತ್ತಮ ಗುಣಮಟ್ಟದ ಸೇರ್ಪಡೆಯಾಗಿದೆ. ಸಿನಿಮಾ ಮಂದಿರಗಳಲ್ಲಿ ಸಿನಿಮಾ ಅದ್ಭುತ ಯಶಸ್ಸು ಕಂಡಿದೆ ಮತ್ತು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ವಿಶ್ವಾದ್ಯಂತದ ನಮ್ಮ ವೀಕ್ಷಕರಿಗೆ ಸಿನಿಮಾ ಅನ್ನು ಒದಗಿಸಲು ನಮಗೆ ಹೆಮ್ಮೆಯಾಗುತ್ತಿದೆ.”

“ನಿರ್ದೇಶಕರ ದೃಷ್ಟಿಕೋನವನ್ನು ಹೇಗೆ ವಾಸ್ತವಕ್ಕೆ ತರಬೇಕು ಎಂದು ಪುನೀತ್‌ ರಾಜ್‌ಕುಮಾರ್‌ಗೆ ತಿಳಿದಿದೆ. ಇದೇ ಕಾರಣಕ್ಕೆ ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತದೆ. ಯುವರತ್ನದ ಯಶಸ್ಸಿನಿಂದಾಗಿ, ಅವರೊಂದಿಗೆ ಇನ್ನೊಂದು ಸುಪರ್ ಹಿಟ್‌ ಸಿನಿಮಾವನ್ನು ಮಾಡಲು ನನಗೆ ಹುಮ್ಮಸ್ಸು ಮೂಡಿದೆ” ಎಂದು ಲೇಖಕ ಮತ್ತು ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೇಳಿದ್ದಾರೆ. “ಸಿನಿಮಾದಲ್ಲಿ ನೋಡಬೇಕಾದ ಸಂಗತಿಗಳು ಹಲವು ಇವೆ. ಅದ್ಭುತ ತಾರಾಗಣದಿಂದ ಉತ್ತಮ ಕಥೆ ಇದರಲ್ಲಿವೆ. ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದಂದಿನಿಂದಲೂ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಮುಗಿಬಿದ್ದಿದ್ದಾರೆ. ನಾವು ಈ ಸಿನಿಮಾವನ್ನು ಇನ್ನೂ ದೊಡ್ಡ ಪ್ರೇಕ್ಷಕ ವರ್ಗಕ್ಕೆ ತೋರಿಸಬೇಕಿದೆ. ಈ ಮೂಲಕ ಎಲ್ಲರೂ ಸಿನಿಮಾವನ್ನು ತಮ್ಮ ಮನೆಗಳಲ್ಲಿ ಕುಳಿತು ವೀಕ್ಷಿಸಬಹುದಾಗಿದೆ. 240 ದೇಶಗಳಲ್ಲಿ ಡಿಜಿಟಲ್ ಬಿಡುಗಡೆಯಾಗುವ ಮೂಲಕ ಸಿನಿಮಾ ಅದ್ಭುತವನ್ನು ಸೃಷ್ಟಿಸಲಿದೆ ಎಂಬ ಆತ್ಮವಿಶ್ವಾಸವಿದೆ. ಆಕ್ಷನ್‌, ಭಾವನೆ, ಕಾಮಿಡಿ ಹಾಗೂ ರೊಮ್ಯಾನ್ಸ್‌ ಒಳಗೊಂಡ ಸಿನಿಮಾ ಅಭಿಮಾನಿಗಳನ್ನು ರಂಜಿಸಲಿದೆ.

ಡಿಜಿಟಲ್‌ ಪ್ರೀಮಿಯರ್‌ಗೂ ಮುನ್ನ ತಮ್ಮ ಅನುಭವವನ್ನು ಹಂಚಿಕೊಂಡ ಪ್ರಮುಖ ನಟ ಪುನೀತ್‌ ರಾಜ್‌ಕುಮಾರ್‌ “ಸಂತೋಷ್‌ ಆನಂದರಾಮ್‌ ಮತ್ತು ಪ್ರಕಾಶ್ ರಾಜ್‌ ಜೊತೆಗೆ ಸಹಭಾಗಿತ್ವವು ನಾಲ್ಕು ವರ್ಷಗಳ ನಂತರ ಮರಳಿ ಲಭ್ಯವಾಗಿದೆ. ಸಿನಿಮಾ ಪ್ರಮುಖ ಮತ್ತು ಈ ಸಮಯಕ್ಕೆ ಸೂಕ್ತವಾದ ವಿಷಯವನ್ನು ಪ್ರಸ್ತಾಪಿಸುತ್ತಿದೆ. ಒಳ್ಳೆಯ ಸಂಭಾಷಣೆ, ಅತ್ಯಂತ ಕುತೂಹಲಕರ ಆಕ್ಷನ್‌ ದೃಶ್ಯಗಳು ಮತ್ತು ಭಾವನಾತ್ಮಕ ದೃಶ್ಯಗಳನ್ನು ಒಳಗೊಂಡ ಸಿನಿಮಾ ಸಂಪೂರ್ಣ ಮನರಂಜನೆಯನ್ನು ನೀಡುತ್ತದೆ. ಇಡೀ ತಂಡದ ಜೊತೆಗೆ ಬಾಕ್ಸ್ ಆಫೀಸ್ ಯಶಸ್ಸನ್ನು ನಾನು ಹಂಚಿಕೊಳ್ಳುತ್ತಿದ್ದೇನೆ ಮತ್ತು ಅಮೆಜಾನ್‌ ಪ್ರೈಮ್ ವೀಡಿಯೋದಲ್ಲಿ ಸಿನಿಮಾದ ಡಿಜಿಟಲ್‌ ಪ್ರೀಮಿಯರ್ ಬಗ್ಗೆ ಅತ್ಯಂತ ನಿರೀಕ್ಷೆ ಹೊಂದಿದ್ದೇನೆ” ಎಂದಿದ್ದಾರೆ.

ಯುವರತ್ನ ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್‌ ಹೆಮ್ಮೆಪಡುತ್ತಿದೆ.
ಪ್ರಸ್ತುತ ಸಾಂಕ್ರಾಮಿಕ ರೋಗ ಹರಡುತ್ತಿರುವ ಸನ್ನಿವೇಶದಲ್ಲಿ, ಹೆಚ್ಚಿನ ಪ್ರೇಕ್ಷಕರಿಗೆ, ಅದರಲ್ಲೂ ಕುಟುಂಬದ ಸದಸ್ಯರು ಮತ್ತು ವೃದ್ಧರಿಗೆ ಉತ್ತಮ ಕಂಟೆಂಟ್ ಅನ್ನು ತಲುಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ್ದಾಗಿದೆ. ಎಲ್ಲ ಅಭಿಮಾನಿಗಳು, ಸಿನಿಮಾ ಕ್ಷೇತ್ರದ ಗಣ್ಯರು ಮತ್ತು ಎಲ್ಲ ಹಿತೈಷಿಗಳ ಸಹಕಾರವನ್ನು ನಾವು ಕೋರುತ್ತೇವೆ. ಯುವರತ್ನ ಸಿನಿಮಾ ವೀಕ್ಷಿಸಿದ ಎಲ್ಲರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಮತ್ತು ಇನ್ನಷ್ಟು ವೀಕ್ಷಕರಿಗೆ ಸಿನಿಮಾವನ್ನು ತಲುಪಿಸಲು ಅಮೆಜಾನ್ ಪ್ರೈಮ್ ವೀಡಿಯೋ ನೆರವಾಗಲಿದೆ. ಆರಾಮವಾಗಿ ವೀಕ್ಷಿಸಿ ಮತ್ತು ಯುವರತ್ನದ ಶಕ್ತಿಯನ್ನು ಅನುಭವಿಸಿ.

 

Leave a Reply

Your email address will not be published. Required fields are marked *