ಇದು ‘ವಿರಾಟ್ ಪರ್ವ’
ಇತ್ತೀಚೆಗೆ ಚಂದನವನದಲ್ಲಿ ಹೊಸಬರ, ಹೊಸ ಪ್ರಯೋಗಾತ್ಮಕ ಸಿನಿಮಾಗಳು ಗಾಂಧಿನಗರದಲ್ಲಿ ಸಕತ್ ಟಾಕ್ ಕ್ರಿಯೇಟ್ ಮಾಡುತ್ತಿವೆ. GBಹಾಗೇ ಅಂತಹ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಕೂಡ ಆಗುತ್ತಿದೆ. ಇದೀಗಾ ಅದೇ ಸಾಲಿಗೆ ಹೊಸಬರ ತಂಡವೊಂದು ಸೇರ್ಪಡೆಗೊಂಡಿದೆ.
ಇಲ್ಲೊಂದು ಹೊಸಬರ ಚಿತ್ರತಂಡ ‘ವಿರಾಟ್ಪರ್ವ’ ಎಂಬ ವಿಭಿನ್ನ ಕಥೆಯನ್ನ ಹೊತ್ತು ಗಾಂಧಿನಗರಕ್ಕೆ ಕಾಲಿಟ್ಟಿದೆ. ಈಗಾಗಲೇ ಚಿತ್ರತಂಡ ಎರಡು ವಿಭಿನ್ನ ಪೋಸ್ಟರ್ ಗಳನ್ನ ಬಿಡುಗಡೆಗೊಳಿಸಿ ಗಾಂಧಿನಗರ ಮಂದಿಯ ಹುಬ್ಬೇರಿಸುವಂತೆ ಮಾಡಿದೆ.
ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸುನೀಲ್ ರಾಜ್ ‘ವಿರಾಟ್ ಪರ್ವ’ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ಮುದ್ದು ಮನಸೇ ಖ್ಯಾತಿಯ ಅನಂತ್ ಶೈನ್ ಆ್ಯಕ್ಷನ್ ಕಟ್ ಹೇಳುತ್ತಿದ್ದು. ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಿವು ಬಿಕೆ ಶಿವಸೇನಾ ಛಾಯಾಗ್ರಹಣವಿರುವ ‘ವಿರಾಟ್ಪರ್ವ’ ಆ್ಯಕ್ಷನ್ ಓರಿಯಂಟೆಡ್ ಮಾಸ್ ಸಿನಿಮಾವಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರುಗೌಡ, ಯಶ್ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ.
ಈಗಾಗಲೇ ಚಿತ್ರದ ಮೊದಲ ಪೊಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಎರಡನೇ ಪೋಸ್ಟರ್ ನ ಮೈಸೂರಿನ ಹುತಾತ್ಮ ಯೋಧ ಹೇಮಚಂದರ್ ರ ಪೋಷಕರಿಂದ ರಿಲೀಸ್ ಮಾಡಿಸಿದೆ. ಚಿತ್ರದಲ್ಲಿ ಯಶ್ ಶೆಟ್ಟಿ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರದಲ್ಲಿ ತುಂಬಾ ವಿಶೇಷವಾದ ಟ್ರ್ಯಾಕ್ ಅದಾಗಿರಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದ್ದು, ಚಿತ್ರದ ಮೇಲಿನ ಕುತೂಹಲವನ್ನ ದುಪ್ಪಟ್ಟುಗೊಳಿಸಿದೆ. ಚಿತ್ರ ಸೈನಿಕನ ಪಾತ್ರದ ಪೋಸ್ಟರ್ ಅನ್ನ ಕರುನಾಡ ವೀರ ಮೈಸೂರಿನ ಹುತಾತ್ಮ ಯೋಧ ಹೇಮಚಂದರ್ ಅವರ ಪೋಷಕರಿಂದ ಪೊಸ್ಟರ್ ಬಿಡುಗಡೆಗೊಳಿಸಿ ಎಲ್ಲರೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂರು ವಿಭಿನ್ನ ಕಥೆಗಳ ಸಂಗಮವಾಗಿರಲಿರೋ ವಿರಾಟಪರ್ವದಲ್ಲಿ ನಾತಿಚರಾಮಿ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿದ್ದ ನಿರ್ದೇಶಕ ಮಂಸೋರೆ ಬಣ್ಣ ಹಚ್ಚುತ್ತಿರುವುದು ಮತ್ತೊಂದು ವಿಶೇಷವಾಗಿದೆ. ವಿರಾಟಪರ್ವ ಚಿತ್ರದ ಪಾತ್ರವೊಂದರ ಕಥೆ ಕೇಳಿ ಇಂಪ್ರೆಸ್ ಆಗಿರೋ ಮಂಸೋರೆ, ಸಿನಿಮಾದಲ್ಲಿ ನನಗೆ ನೀಡಿರುವ ಪಾತ್ರ ಜೀವನಕ್ಕೆ ಹತ್ತಿರುವ ಆಗಿರುವುದರಿಂದ ಚಿತ್ರದಲ್ಲಿ ನಟಿಸಲು ಉತ್ಸುಹಕನಾಗಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟಾರೆ, ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಹಲವು ವಿಶೇಷ ವಿಚಾರಗಳಿಗೆ ಸಾಕಷ್ಟು ಸುದ್ದಿ ಮಾಡುತ್ತಿರುವ ವಿರಾಟ್ಪರ್ವ ಸಿನಿ ಪ್ರೇಕ್ಷಕರಿಗೆ ಒಂದು ವಿಭಿನ್ನ ಸಿನಿಮಾ ನೀಡಲು ಮುಂದಾಗಿದೆ. ಚಿತ್ರದ ಟೀಸರ್ ವೊಂದನ್ನ ಸದ್ಯದಲ್ಲೇ ರಿಲೀಸ್ ಮಾಡುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ. ಪೋಸ್ಟರ್ ಮೂಲಕವೇ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಸಿನಿಮಾ, ಇನ್ನ ಟೀಸರ್ ಬಿಡುಗಡೆಗೊಂಡ ಬಳಿಕ ಸಿನಿ ಪ್ರೇಕ್ಷಕರನ್ನ ಹೇಗೆ ಸೆಳೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.