‘ರೈತ’ನಾದ ‘ಪ್ರಥಮ್’

‘ರೈತ’ನಾದ ‘ಪ್ರಥಮ್’

ಪ್ರಥಮ್ ಎಂಬ ಹೆಸರು ಪ್ರಥಮ ಬಾರಿಗೆ ಕಿವಿಗೆ ಕೇಳಿಸಿದ ತಕ್ಷಣವೇ ನೆನಪಾಗೋದು ಬಿಗ್ ಬಾಸ್ ಕಾರ್ಯಕ್ರಮ. ಒಂದಷ್ಟು ವಿವಾದಗಳು. ಜೊತೆಯಲ್ಲಿ ದೇವ್ರಂಥಾ ಮನುಷ್ಯ ಸೇರಿ ಎರಡ್ಮೂರು ಚಿತ್ರಗಳು. ತನ್ನ ವ್ಯಕ್ತಿತ್ವದಿಂದನೇ ಕನ್ನಡಿಗರ ಪಾಲಿಗೆ ಕೂತುಹಲದ ವಸ್ತುವಾದ ಪ್ರಥಮ್ ಕಳೆದ ಒಂದೂವರೆ ವರ್ಷದ ಹಿಂದೆ ಏಕಾಏಕಿ ಬಣ್ಣದ ಪ್ರಪಂಚದಿಂದ ದೂರವಾಗಿ ಮರಳಿ ಹಳ್ಳಿಗೆ ಸೇರುವ ಮಾತುಗಳನ್ನಾಡಿದ್ದರು. ನಾನು ವ್ಯವಸಾಯ ಮಾಡ್ತೀನಿ ಕೃಷಿಕನಾಗ್ತೀನಿ ಅಂದಿದ್ದರು. ಅದಾದ ಬಳಿಕ.. ಪ್ರಥಮ್ ಆಗಾಗ ಗಾಂಧಿನಗರದಲ್ಲೂ ಕಾಣಿಸಿಕೊಳ್ತಿದ್ದರು. ಹಾಗಾಗಿ, ಪ್ರಥಮ್ ಮಾತನ್ನ ಯಾರು ಸಿರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಬದ್ಲಿಗೆ ಪ್ರಥಮ್ ಹಳ್ಳಿ ಸೇರುವ ಮಾತನ್ನಾಡಿದ್ದು ಪಬ್ಲಿಸಿಟಿಗೋಸ್ಕರ ಅಂಥ ನಕ್ಕು ಸುಮ್ಮನಾಗಿದ್ದರು. ಪ್ರಥಮ್ನ ಅನುಮಾನದ ದೃಷ್ಠಿಯಲ್ಲೇ ನೋಡಿ ಅದೆಲ್ಲಾ ಸಾಧ್ಯವಾ ಅಂದಿದ್ದರು. ಆದ್ರೀಗ.. ಪ್ರಥಮ್ ಅಸಾಧ್ಯವದದ್ದನ್ನೇ ಸಾಧ್ಯವನ್ನಾಗಿಸಿದ್ದಾರೆ. ಕೃಷಿಕನಾಗಿ ಅಂದು ಆಡಿಕೊಂಡಿದ್ದವ್ರನ್ನೇ ಬೆರಗಾಗಿಸಿದ್ದಾರೆ. ಹೌದು. ಕೊಳ್ಳೇಗಾಲದಿಂದ ಸ್ವಲ್ಪ ದೂರವಿರುವ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿ ಖರೀದಿಸಿ ಪ್ರಥಮ್ ಭರ್ಜರಿ ವ್ಯವಸಾಯ ಮಾಡಿದ್ಧಾರೆ. ವ್ಯವಸಾಯಕ್ಕೆ ಏನು ಬೇಕೋ ಅದನ್ನ ತಾವೇ ವ್ಯಯಿಸಿ ತನ್ನ ತಂದೆ ಜೊತೆಗೂಡಿ ಜೋಳ, ಹುರಳಿಕಾಳು ಬೆಳೆದಿದ್ದಾರೆ. ಸರಿ ಸುಮಾರು ಎರಡೂವರೆ ಲಕ್ಷ ಬೆಳೆ ಬೆಳೆದು ಲಾಭ ಮಾಡಿದ್ದಾರೆ. ಈ ಬಾರಿ ನೀರಿನ ಅಭಾವವಿದ್ದರೂ ಭರ್ಜರಿ ಬೆಳೆ ತೆಗೆಯುವ ಮೂಲಕ ಪಕ್ಕಾ ಕೃಷಿಕನಾಗುವ ಸೂಚನೆಯನ್ನು ನೀಡಿದ್ದಾರೆ. ಒಟ್ನಲ್ಲಿ ಪ್ರಥಮ್ ಅಂದು ಆಡಿದ ಮಾತಿನಂತೆ ಇದೀಗ ಕೃಷಿಕನಾಗಿದ್ದಾರೆ. ಮನಸ್ಸಿದ್ದರೆ ಮಾರ್ಗ ಅನ್ನುವದನ್ನು ಪ್ರಥಮ್ ಸಾಬೀತು ಮಾಡಿದ್ದಾರೆ. ಉಳಿದವರಿಗೂ ಮಾದರಿಯಾಗಿದ್ದಾರೆ. ಇದನ್ನ ನೋಡಿದ ಗಾಂಧಿನಗರದ ಮಂದಿ ಇನ್ನಾದ್ರೂ ಪ್ರಥಮ್ ಅವ್ರನ್ನ ಸಿರಿಯಸ್ಸಾಗಿ ತೆಗೆದುಕೊಳ್ತಾರಾ ಕಾದು ನೋಡ್ಬೇಕು.

 

Leave a Reply

Your email address will not be published. Required fields are marked *