ಮತ್ತೆ ಒಂದಾಗುತ್ತಾ ಈ ಜೋಡಿ..! ಚಿತ್ರರಂಗಕ್ಕೆ ಮರಳುತ್ತಾರಾ, ಮೋಹಕ ತಾರೆ..!
ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿರಲಿಲ್ಲ. ಇದಕ್ಕೆ ತಕ್ಕಂತೆ ರಮ್ಯಾ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿ ಒಂದು ವರ್ಷಗಳೇ ಕಳೆಯುತ್ತಿವೆ. ಇದ್ರ ನಡುವೆ ಇದೀಗ ರಮ್ಯಾ ಏಕಾಏಕಿ ಜಗ್ಗೇಶ್ಗೆ ನೆನಪಾಗಿದ್ದಾರೆ. ಹೌದು. ಪೂರ್ವಾಶ್ರಮದಲ್ಲಿ ರಮ್ಯಾ ನಟಿಯಾಗಿದ್ದರಲ್ಲಾ..? ಆ ಕಾಲದಲ್ಲಿ ಒಂದು ವಿವಾದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನೀರ್ ದೋಸೆ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಒಪ್ಪಿಗೆ ಇಲ್ಲದೇ ಫೋಟೋ ಜನರ್ಲಿಸ್ಟ್ ತನ್ನ ಫೋಟೋ ತೆಗೆದಿದ್ದಾರೆ ಎಂಬ ವಿಚಾರವನ್ನೇ ಹಿಡಿದು ರಮ್ಯಾ ಚಿತ್ರದಿಂದ ಅರ್ಧಕ್ಕೆ ಹೊರನಡೆದಿದ್ದು ಜಗ್ಗೇಶ್ ಅವ್ರನ್ನ ಇನ್ನಿಲ್ಲದಂತೆ ಕೆರಳಿಸಿತ್ತು. ನೀರ್ ದೋಸೆಯ ಇದೇ ವಿವಾದದ ಬಳಿಕ ಸಮಯ ಸಿಕ್ಕಾಗಲೆಲ್ಲಾ ಜಗ್ಗೇಶ್ ರಮ್ಯಾ ಅವ್ರನ್ನೇ ಟಾರ್ಗೆಟ್ ಮಾಡುತ್ತಾನೇ ಬಂದಿದ್ದರು. ಕಳೆದ ವರ್ಷದ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮತದಾನ ಬಹುಮುಖ್ಯ, ಎಳಿ ಎದ್ದೇಳಿ ಅಂಥ ಯುವಸಮೂಹಕ್ಕೆ ರಮ್ಯಾ ಸಂದೇಶ ಕೊಟ್ಟಾಗ್ಲೂ ಜಗ್ಗೇಶ್ ರಮ್ಯಾಗೊಂದು ಪ್ರಶ್ನೆ ಕೇಳಿದ್ದರು. ಮತದಾನ ಕಡ್ಡಾಯ ಅನ್ನೋರು ನೀವ್ಯಾಕೇ ಮಂಡ್ಯ ಬಿಟ್ಟಿರಿ ಎಂದಿದ್ದರು. ರಮ್ಯಾರನ್ನ ಎಸ್ಕೇಪ್ ಸುಂದರಿ ಅಂದಿದ್ದ ಜಗ್ಗೇಶ್ ರಮ್ಯಾಗೆ ರಿಟೈರ್ಡ್ ಬ್ಯೂಟಿ ಅಂಥ ಪರೋಕ್ಷವಾಗಿಯೂ ಟಾಂಗ್ ಕೊಟ್ಟಿದ್ದರು. ಸಿಂಪಲ್ಲಾಗಿ ಹೇಳಬೇಕಂದ್ರೆ ಜಗ್ಗೇಶ್ ಹಾಗೂ ರಮ್ಯಾ ಹಾವು ಮುಂಗುಸಿಯಂತೆಯೇ ಇಲ್ಲೀತನ್ಕ ಕಿತ್ತಾಡಿಕೊಳ್ತಿದ್ದರು. ಆದ್ರೀಗ ಜಗ್ಗೇಶ್ ಮನಪರಿವರ್ತನೆಯಾದಂತಿದೆ. ಕಾರಣ, ಜಗ್ಗೇಶ್, ರಮ್ಯಾ ಒಬ್ಬ ಒಳ್ಳೇಯ ನಟಿ ಅನ್ನುವ ಮಾತುಗಳನ್ನಾಡಿದ್ದಾರೆ. ಹೌದು ನವರಸ ನಾಯಕ ಜಗ್ಗೇಶ್ ಈಗ ತಮ್ಮ ಇನ್ಸ್ಟಾಗ್ರಾಂನಲ್ಲಿ ರಮ್ಯಾರನ್ನು ಹೊಗಳಿ ಪೋಸ್ಟ್ ಹಾಕಿದ್ದಾರೆ. ಅದು, ಹಿಂದಿನ ಎಪಿಸೋಡನ್ನ ನೆನೆದು. ಹೌದು, ಅದು ಪುನೀತ್ ರಾಜಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ. ಇದೇ ಕಾರ್ಯಕ್ರಮದಲ್ಲಿ ತುಂಬ ಹಿಂದೆ ನಟಿ ರಮ್ಯಾ ಪಾಲ್ಗೊಂಡಿದ್ದರು. ಅದರಲ್ಲಿ ರಮ್ಯಾ ಅವರು ಪುನೀತ್ ರಾಜ್ಕುಮಾರ್ ಅವರ ಬಳಿ ಜಗ್ಗೇಶ್ ಅವರ ಮಿಮಿಕ್ರಿ ಮಾಡುವಂತೆ ಕೇಳಿಕೊಂಡಿದ್ದರು. ಆಗ ಪುನೀತ್ ಜಗ್ಗೇಶ್ ಅವರ ಎರಡು ಡೈಲಾಗ್ಗಳನ್ನು ಅನುಕರಣೆ ಮಾಡಿದ್ದರು. ಮನರಂಜಿಸಿದ್ದರು. ಆ ಕಾಲಕ್ಕೆ ತುಂಬಾನೇ ವೈರಲ್ ಆಗಿದ್ದ ವಿಡಿಯೋ ಅದು. ಅದೇ ಫನ್ನಿಯಾದ, ಹಳೇ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಇತ್ತೀಚಿಗೆ ಹಂಚಿಕೊಂಡಿರುವ ಜಗ್ಗೇಶ್ ಕಲಾಬಂಧು ಪುನೀತ್ ರಾಜ್ ಕುಮಾರ್ ನನ್ನ ಇಮಿಟೇಟ್ ಮಾಡಿದ ವಿಡಿಯೋ ಖುಷಿ ಕೊಟ್ಟಿತು. ಕೆಲ ವ್ಯಯಕ್ತಿಕ ಸಿದ್ಧಾಂತ ಒಡೆದ ಹಾಲಾಯಿತು ಮನಸ್ಸು. ವ್ಯಯಕ್ತಿಕವಾಗಿ ನಾನು ಈಕೆಯನ್ನ ಬಹಳ ಇಷ್ಟಪಡುವೆ..ಈಕೆ ಒಳ್ಳೇ ನಟಿ.. ಮತ್ತೆ ಈಕೆ ನಟಿಸಲಿ ಎಂದು ಹಾರೈಸುವೆ.. Come Back ರಮ್ಯಾ.. God Bless.. ಅಂದಿದ್ದಾರೆ ಜಗ್ಗೇಶ್. ಜಗ್ಗೇಶ್ ಇಂಥಹದ್ದೊಂದು ಪೋಸ್ಟ್ ಶೇರ್ ಮಾಡಿ ರಮ್ಯಾರನ್ನ ಹೊಗಳುತ್ತಿದ್ದಂತೆ ಜಗ್ಗೇಶ್ ಅವ್ರ ಒಳ್ಳೇತನಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಲಾಂ ಹೊಡೆಯುತ್ತಿದ್ದಾರೆ. ನೀವು ಎಲ್ಲರಿಗೂ ಸ್ಪೂರ್ತಿ ನಿಮ್ಮ ಮಾತುಗಳೂ ಸ್ಪೂರ್ತಿ ಅನ್ನುತ್ತಿದ್ಧಾರೆ. ನಿಮ್ಮ ಮನಸು ಹಾಲಿನಂತಹ ಮನಸು ಅನ್ನುತ್ತಿದ್ದಾರೆ. ಇದ್ರ ನಡುವೆ ರಮ್ಯಾ ಅವ್ರನ್ನ ಸಿಲ್ವರ್ ಸ್ಕ್ರೀನ್ ಹಾಗೂ ಸೊಶಿಯಲ್ ಮೀಡಿಯಾ ಸ್ಕ್ರೀನ್ನಲ್ಲಿ ಮಿಸ್ ಮಾಡಿಕೊಳ್ತಿರುವ ರಮ್ಯಾ ಅಭಿಮಾನಿಗಳೂ, ಜಗ್ಗೇಶ್.. ಅವ್ರ ಮಾತಿಗೆ ತಲೆ ದೂಗಿದ್ದಾರೆ. ರಮ್ಯಾ ಅವ್ರನ್ನ ಉತ್ತಮ ನಟಿ ಅಂದಿದ್ದಕ್ಕೆ ರಮ್ಯಾ ಪರವಾಗಿ ಧನ್ಯವಾದಗಳನ್ನ ಹೇಳ್ತಿದ್ದಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಹಾಗೂ ಪುನೀತ್ ಕೋಟ್ಯಾಧಿಪತಿ ಎಪಿಸೋಡಿನ ತುಣುಕು ಹಾಗೂ ಜಗ್ಗೇಶ್ ಸ್ಟೇಟ್ಮೆಂಟು ಎರಡು ವೈರಲ್ ಆಗುತ್ತಿವೆ. ಜಗ್ಗೇಶ್ ಮನಸ್ಸು ಬದಲಿಸಿದಂತೆ, ರಮ್ಯಾ ಮನಸು ಬದಲಾಗುತ್ತಾ. ಇಬ್ಬರ ನಡುವಿನ ಹಗೆತನ ಕೊನೆಯಾಗುತ್ತಾ.. ರಮ್ಯಾ ಚಿತ್ರರಂಗಕ್ಕೆ ವಾಪಸ್ಸು ಬರ್ತರಾ ಲೇಟ್ಸ್ ಸೀ