ನೀವೂ ಕೋಟ್ಯಧಿಪತಿ ಆಗಬಹುದು.!
ನನ್ನ ಸಂಬಳ ಕಡಿಮೆ ಇದೆ. ಏನು ಮಾಡೋದು. ಹೂಡಿಕೆ ಮಾಡಿ ದುಡ್ಡಿಂದ ದುಡ್ಡು ಮಾಡೋದೆಲ್ಲಾ ಶ್ರೀಮಂತರಿಗೆ ಮಾತ್ರ ಸಾಧ್ಯ ಎಂದು ಅನೇಕರು ನಂಬಿದ್ದಾರೆ. ಆದರೆ ಸಮಯೋಚಿತವಾಗಿ, ಕ್ರಮಬದ್ಧವಾಗಿ ಕಾಲಕಾಲಕ್ಕೆ ಹೂಡಿಕೆ ಮಾಡುತ್ತಾ ಬಂದರೆ ಶ್ರೀಸಾಮಾನ್ಯರೂ ಸಹ ಕೋಟ್ಯಧಿಪತಿಗಳಾಗಬಹುದು. ಗಳಿಸಿದ ಆದಾಯದಲ್ಲಿ ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿದಾಗ ಹಣ ಬೆಳೆಸಲು ಸಾಧ್ಯವಾಗುತ್ತದೆ.
ಶ್ರೀಸಾಮಾನ್ಯ ಕೋಟ್ಯಧಿಪತಿಯಾದ ಕತೆ : 30 ವರ್ಷ ವಯಸ್ಸಿನ ಪವನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಆರಂಭಿಸುತ್ತಾರೆ . ಮೊದಲ ಉದ್ಯೋಗದಲ್ಲೇ ಪವನ್ ಗೆ ಒಳ್ಳೆಯ ಸಂಬಳ ಸಿಗುತ್ತೆ. ಪವನ್ ನ ತಿಂಗಳ ಸಂಬಳ 45 ಸಾವಿರ. ಪವನ್ ಕೆಲಸಕ್ಕೆ ಸೇರಿದ ತಕ್ಷಣದಿಂದಲೇ ಅಂದರೆ 30 ನೇ ವರ್ಷಕ್ಕೇ ಮ್ಯೂಚುವಲ್ ಫಂಡ್ ಹೂಡಿಕೆ ಆರಂಭಿಸುತ್ತಾರೆ. ಪ್ರತಿ ತಿಂಗಳು ಪವನ್ 7500 ರೂಪಾಯಿಯನ್ನ (ದಿನದ ಲೆಕ್ಕದಲ್ಲಿ 250 ರೂ ಹೂಡಿಕೆ) ಮ್ಯೂಚುವಲ್ ಫಂಡ್ ನಲ್ಲಿ ತೊಡಗಿಸುತ್ತಾ ಬರುತ್ತಾರೆ. ವರ್ಷಕ್ಕೆ 90 ಸಾವಿರ ರೂ ಗಳನ್ನು ಮ್ಯೂಚುವಲ್ ಫಂಡ್ ಗಾಗೇ ಮಿಸಲಿಡುತ್ತಾರೆ. ಹೀಗೆ 15 ವರ್ಷಗಳ ಕಾಲ ಪವನ್ ಹೂಡಿಕೆ ಮಾಡುತ್ತಾ ಸಾಗುತ್ತಾರೆ. 15 ವರ್ಷಗಳ ವೇಳೆಗೆ ಪವನ್ 13 ಲಕ್ಷದ 50 ಸಾವಿರ ಹೂಡಿಕೆ ಮಾಡಿರುತ್ತಾರೆ. ಈ ಹೂಡಿಕೆಗೆ ಪವನ್ ಗೆ ಶೇ 12 ರ ಲಾಭಾಂಶದ ಲೆಕ್ಕದಲ್ಲಿ 37 ಲಕ್ಷದ 84 ಸಾವಿರ ರೂಪಾಯಿ( ಹೂಡಿಕೆ ಸೇರಿ) ಬಂದಿರುತ್ತದೆ. ಪವನ್ 37 ಲಕ್ಷ 84 ಸಾವಿರ ರೂಪಾಯಿಯನ್ನ ಮುಂದಿನ 15 ವರ್ಷಗಳ ಕಾಲ ಹೂಡಿಕೆ ಮಾಡುತ್ತಾರೆ. ಅಂದರೆ ಪವನ್ ತಮ್ಮ ನಿವೃತ್ತಿಗಾಗಿ ಈ ದುಡ್ಡನ್ನ ಮೀಸಲಿಡುತ್ತಾರೆ. ಹೀಗೆ ಮಾಡಿದ ಪರಿಣಾಮ ಪವನ್ 60 ವರ್ಷ ವಾಗುವ ವೇಳೆಗೆ 1 ಕೋಟಿ 17 ಲಕ್ಷದ 53 ಸಾವಿರ ರೂಪಾಯಿ ಸಿಗುತ್ತದೆ. ಹೌದು ಕ್ರಮಬದ್ಧವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೂ ದೊಡ್ಡ ಮೊತ್ತದ ಹಣವನ್ನು ಒಟ್ಟು ಮಾಡಬಹುದು ಎನ್ನುವುದಕ್ಕೆ ಪವನ್ ಅವರ ಹೂಡಿಕೆ ಕ್ರಮವೇ ಸಾಕ್ಷಿ. ನೆನಪಿರಲಿ, ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಏನೇ ಅಂದ್ರು ಒಂದಿಷ್ಟು ರಿಸ್ಕ್ ಇದ್ದೇ ಇರುತ್ತದೆ. ಅರಿತು ಎಚ್ಚರಿಕೆಯಿಂದ ದೀರ್ಘಾವಧಿಗೆ ಮ್ಯೂಚುವಲ್ ಫಂಡ್ ನಲ್ಲಿ ಹಣ ತೊಡಗಿಸಿದರೆ ಲಾಭದ ಸಾಧ್ಯತೆಯೇ ಹೆಚ್ಚು. ಹಾಗಾದ್ರೆ ಇನ್ಯಾಕೆ ತಡ ಅರಿತು ಹೂಡಿಕೆ ಮಾಡಿ, ಶ್ರೀಮಂತಿಕೆಯ ಪ್ರಯಾಣವನ್ನು ಈಗಲೇ ಶುರು ಮಾಡಿ ( ಪಟ್ಟಿ ಗಮನಿಸಿ)
ದಿನಕ್ಕೆ 250 ರೂ. ಇನ್ವೆಸ್ಟ್ ಮಾಡಿದ್ರೆ ಪವನ್ ರಂತೆ ನೀವು ಕೋಟ್ಯಧಿಪತಿ.! | |
ಹೂಡಿಕೆ ಆರಂಭಿಸಿದಾಗ ಹೂಡಿಕೆದಾರನ ವಯಸ್ಸು | 30 ವರ್ಷ |
ಪ್ರತಿ ದಿನದ ಹೂಡಿಕೆ ಮೊತ್ತ | ರೂ. 250 |
ತಿಂಗಳಿಗೆ ಹೂಡಿಕೆ ಮೊತ್ತ | ರೂ. 7500 |
ವಾರ್ಷಿಕ ಹೂಡಿಕೆ ಮೊತ್ತ | ರೂ. 90,000 |
SIP ಯಿಂದ ನಿರೀಕ್ಷಿತ ಲಾಭಾಂಶ | ಶೇ 12 ರಷ್ಟು |
15 ವರ್ಷಗಳಲ್ಲಿ ಒಟ್ಟು ಹೂಡಿಕೆ ಮೊತ್ತ ( 180 ತಿಂಗಳು) | ರೂ. 13,50,000 |
ಹೂಡಿಕೆ ನಿಲ್ಲಿಸಿದಾಗ ಹೂಡಿಕೆದಾರನ ವಯಸ್ಸು | 45 ವರ್ಷ |
ತಿಂಗಳ ಹೂಡಿಕೆ ನಿಲ್ಲಿಸಿದಾಗ ಹೂಡಿಕೆದಾರ ಗಳಿಸಿದ್ದ ಲಾಭಾಂಶ | ರೂ. 37,84000 |
ಹೂಡಿಕೆದಾರನಿಗೆ 60 ವರ್ಷ ತುಂಬಿದಾಗ ಸಿಗುವ ಮೊತ್ತ | ರೂ. 1,17,53,000 |