Category: Sandalwood

ʻಲಾʼ ಇಂದು ಮೋಷನ್‌ ಪೋಸ್ಟರ್‌, ನಾಳೆ ಟ್ರೇಲರ್‌ ಬಿಡುಗಡೆ

ʻಲಾʼ ಚಿತ್ರದ ಮೋಷನ್‌ ಪೋಸ್ಟರ್‌ ನ್ನ ಅಮೆಜಾನ್‌ ಪ್ರೈಮ್‌ ಇಂದು ಬಿಡುಗಡೆಗೊಳಿಸಿದೆ. ಜುಲೈ 17 ರಂದು ಬಿಡುಗಡೆಯಾಗಲಿರುವ ʻಲಾʼ ಚಿತ್ರದ ಟ್ರೇಲರ್‌ ನಾಳೆ(ಜುಲೈ 9) ಬಿಡುಗಡೆಯಾಗಲಿದೆ. ಪುನೀತ್‌ ರಾಜ್‌ಕುಮಾರ್‌ ರವರ ಪಿಆರ್‌ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದ ಮೂಲಕ ರಾಗಿಣಿ ಚಂದ್ರನ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ಥಿಯೇಟರ್‌ಗಿಂತ ಮೊದಲು ನೇರವಾಗಿ ಓಟಿಟಿ ಪ್ಲಾಟ್‌ಫಾರಂ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ಕನ್ನಡದ ಮೊದಲ ಚಿತ್ರ ʻಲಾʼ. ಜುಲೈ 17 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ…
Read more

ʻಲಾʼ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದು ಖುಷಿ ನೀಡಿದೆ: ರಾಗಿಣಿ ಚಂದ್ರನ್‌.

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17 ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗ್ತಿರುವ ಹಿನ್ನೆಲೆಯಲ್ಲಿ ನಟಿ ರಾಗಿಣಿ ಚಂದ್ರನ್‌ ʻಲಾʼ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ʻಲಾʼ ಸಿನಿಮಾ ಕ್ರೈಂ ಥ್ರಿಲ್ಲರ್‌ ಕಥೆಯನ್ನ ಹೊಂದಿದ್ದು, ಇಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದ ಸುತ್ತ ಕಥೆ ಇದ್ದು, ಆಸಕ್ತಿಕರ ನಿರೂಪಣೆ ಈ ಚಿತ್ರದ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ ರಾಗಿಣಿ ಚಂದ್ರನ್‌. ʻಲಾʼ ಚಿತ್ರದಲ್ಲಿ ಅಭಿನಯಿಸಲು…
Read more

ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಜುಲೈ 17 ಕ್ಕೆ ಕನ್ನಡದ ʼಲಾʼ ಸಿನಿಮಾ ರಿಲೀಸ್.

ಪುನೀತ್‌ ರಾಜ್‌ ಕುಮಾರ್‌ ಅವರ ಪಿಆರ್‌ ಕೆ ಪ್ರೊಡಕ್ಷನ್‌ ನಲ್ಲಿ ನಿರ್ಮಾಣಗೊಂಡಿರೋ ಕನ್ನಡದ ಬಹುನಿರೀಕ್ಷಿತ ʼಲಾʼ ಸಿನಿಮಾ  17 ಜುಲೈ  2020 ರಂದು ಅಮೆಜಾನ್‌ ಫ್ರೈಮ್‌ ನಲ್ಲಿ ಬಿಡುಗಡೆಯಾಗಲಿದೆ. ಕ್ರೈಂ ಥ್ರಿಲ್ಲರ್‌ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್‌ ಅಭಿನಯಿಸಿದ್ದಾರೆ.  ಈ ಸಿನಿಮಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ದ ಧ್ವನಿ ಎತ್ತಲಾಗಿದೆ. ಅಶ್ವಿನಿ ಪನೀತ್‌ ರಾಜ್‌ ಕುಮಾರ್‌, ಎಂ. ಗೋವಿಂದ ನಿರ್ಮಾಣದ ʼಲಾʼ ಸಿನಿಮಾವನ್ನು ರಘು ಸಮರ್ಥ ನಿರ್ದೇಶಿಸಿದ್ದಾರೆ. ರಾಗಿಣಿ…
Read more

ಮಾದೇಶ್ವರನ ಪಾದಕ್ಕೆ ಅಡ್ಡಬಿದ್ದ ವಿಜಿ

ʻಸಲಗʼ ದುನಿಯಾ ವಿಜಿ ಪಾಲಿಗೆ ಚರಿತ್ರೆ ಸೃಷ್ಟಿಸುವ ಅವತಾರವಾಗುತ್ತೆ ಅನ್ನುವ ನಂಬಿಕೆ ಗಾಂಧಿನಗರಕ್ಕಿದೆ. ಇದಕ್ಕೆ ತಕ್ಕಂತೆ ದುನಿಯಾ ವಿಜಿ ಸಲಗಕ್ಕಾಗಿ ಹಗಲಿರುಳು ಬೆವರು ಸುರಿಸಿ ಕೆಲಸ ಮಾಡ್ತಿದ್ದಾರೆ. ಯಾವ ವಿಚಾರದಲ್ಲೂ ಇಲ್ಲಿಯತನಕ ರಾಜಿಯಾಗದ ಕರಿಚಿರತೆ ವಿಜಿ ಇತ್ತೀಚಿಗಷ್ಟೇ ಮಲೇಶಿಯಾದ ಸಿಂಗರ್ ಯೋಗಿ ಅವರನ್ನ ಕನ್ನಡಕ್ಕೆ ಕರೆ ತಂದು, ಹಾಡೊಂದಕ್ಕೆ ದನಿಯಾಗಿಸಿದ್ದರು. ಮಲೇಶಿಯಾದ ತಮಿಳು ಮೂಲದ ಗಾಯಕ ಯೋಗಿ ಕಂಠ ಸಲಗಕ್ಕೆ ಇನ್ನಷ್ಟು ಶಕ್ತಿ ತುಂಬುತ್ತೆ ಎಂಬ ಭರವಸೆಯಲ್ಲೇ, ದುನಿಯಾ ವಿಜಿ ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆ…
Read more

ಗಾಂಧಿನಗರ ಗಾಸಿಪ್‌ : ಕೋಟಿಗೊಬ್ಬ-3

ಕೋಟಿಗೊಬ್ಬ-3 ಇದೀಗ ಗಾಂಧಿನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿರೋ ಸಿನಿಮಾ. ಕಿಚ್ಚ ಸುದೀಪ ಅಭಿನಯದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇ 1 ರಂದು ಕೋಟಿಗೊಬ್ಬ-3 ತೆರೆಗೆ ಬರಲು ಸಿದ್ದವಾಗ್ತಿದೆ. ಆದ್ರೆ ಇದೇ ಟೈಂನಲ್ಲಿ ಗಾಂಧಿನಗರದಲ್ಲಿ ಕೋಟಿಗೊಬ್ಬ ಬಗ್ಗೆ ಕೆಲ ಸ್ವಾರಸ್ಯಕರ ವಿಚಾರಗಳು ಕೇಳಿಬರ್ತಿದ್ದು, ಅವುಗಳನ್ನ ನಿಮ್ಮ ಮುಂದಿಡ್ತಿದ್ದೇವೆ. ಮೇ 1 ನೇ ತಾರೀಖು ಕೋಟಿಗೊಬ್ಬ-3 ರಿಲೀಸ್‌ ಆಗೋದೇ ಡೌಟು ಅನ್ನೋದು ಮೊದಲನೇ ವಿಚಾರ. ಗಾಂಧಿನಗರದ ಮಂದಿಯ ಪ್ರಕಾರ ಕೋಟಿಗೊಬ್ಬ-3…
Read more

ನಿಖಿಲ್‌-ರೇವತಿ ವಿವಾಹ ಆಹ್ವಾನ ಪತ್ರಿಕೆ ಹೇಗಿದೆ..!

ಏಪ್ರಿಲ್ ೧೭ ರಂದು ನಡೆಯಲಿರುವ ಮಾಜಿ ಸಿಎಂ ಹೆಚ್ .ಡಿ‌.ಕುಮಾರಸ್ವಾಮಿ ಪುತ್ರನ ಮದುವೆಗೆ ಈಗಾಗಲೇ ಭರ್ಜರಿ ಸಿದ್ದತೆ ನಡೆದಿದೆ. ನಿಖಿಲ್‌-ರೇವತಿ ಕಲ್ಯಾಣದ ಆಹ್ವಾನ ಪತ್ರಿಕೆ ಸಿದ್ಧವಾಗಿದ್ದು, ಮದುವೆಯ ಕರೆಯೋಲೆ ಅದಿತಿ ಲಿಂಕ್‌ ಮೀಡಿಯಾಗೆ ಲಭ್ಯವಾಗಿದೆ. ನಿಖಿಲ್ ಮತ್ತು ರೇವತಿ ಮದುವೆ ಮೈಸೂರು ರಸ್ತೆ ರಾಮನಗರದಲ್ಲಿ ನಡೆಯಲಿದೆ. ಪುತ್ರನ ಮದುವೆಗೆ ಸಪ್ತಪದಿ ಹೆಸರಿನಲ್ಲಿ ಅದ್ದೂರಿ ಸೆಟ್ ಹಾಕಿಸಲಿರೋ ಮಾಜಿ ಸಿಎಂ ಹೆಚ್.ಡಿ.ಕೆಮದುವೆ ಕಾರ್ಡ್‌ನಲ್ಲೇ ರಾಜಕೀಯ ಕರ್ಮಭೂಮಿ ರಾಮನಗರದಲ್ಲೇ ಪುತ್ರನ ಮದುವೆ ಯಾಕೆ ಎಂದು ಸುಧೀರ್ಘ ವಿವರಣೆ ಸಹಿತ ಮದುವೆ…
Read more

ಮತ್ತೆ ಒಂದಾಗುತ್ತಾ ಈ ಜೋಡಿ..! ಚಿತ್ರರಂಗಕ್ಕೆ ಮರಳುತ್ತಾರಾ, ಮೋಹಕ ತಾರೆ..!

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿರಲಿಲ್ಲ. ಇದಕ್ಕೆ ತಕ್ಕಂತೆ ರಮ್ಯಾ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿ ಒಂದು ವರ್ಷಗಳೇ ಕಳೆಯುತ್ತಿವೆ. ಇದ್ರ ನಡುವೆ ಇದೀಗ ರಮ್ಯಾ ಏಕಾಏಕಿ ಜಗ್ಗೇಶ್ಗೆ ನೆನಪಾಗಿದ್ದಾರೆ. ಹೌದು. ಪೂರ್ವಾಶ್ರಮದಲ್ಲಿ ರಮ್ಯಾ ನಟಿಯಾಗಿದ್ದರಲ್ಲಾ..? ಆ ಕಾಲದಲ್ಲಿ ಒಂದು ವಿವಾದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನೀರ್ ದೋಸೆ ಚಿತ್ರದ…
Read more

‘ರೈತ’ನಾದ ‘ಪ್ರಥಮ್’

ಪ್ರಥಮ್ ಎಂಬ ಹೆಸರು ಪ್ರಥಮ ಬಾರಿಗೆ ಕಿವಿಗೆ ಕೇಳಿಸಿದ ತಕ್ಷಣವೇ ನೆನಪಾಗೋದು ಬಿಗ್ ಬಾಸ್ ಕಾರ್ಯಕ್ರಮ. ಒಂದಷ್ಟು ವಿವಾದಗಳು. ಜೊತೆಯಲ್ಲಿ ದೇವ್ರಂಥಾ ಮನುಷ್ಯ ಸೇರಿ ಎರಡ್ಮೂರು ಚಿತ್ರಗಳು. ತನ್ನ ವ್ಯಕ್ತಿತ್ವದಿಂದನೇ ಕನ್ನಡಿಗರ ಪಾಲಿಗೆ ಕೂತುಹಲದ ವಸ್ತುವಾದ ಪ್ರಥಮ್ ಕಳೆದ ಒಂದೂವರೆ ವರ್ಷದ ಹಿಂದೆ ಏಕಾಏಕಿ ಬಣ್ಣದ ಪ್ರಪಂಚದಿಂದ ದೂರವಾಗಿ ಮರಳಿ ಹಳ್ಳಿಗೆ ಸೇರುವ ಮಾತುಗಳನ್ನಾಡಿದ್ದರು. ನಾನು ವ್ಯವಸಾಯ ಮಾಡ್ತೀನಿ ಕೃಷಿಕನಾಗ್ತೀನಿ ಅಂದಿದ್ದರು. ಅದಾದ ಬಳಿಕ.. ಪ್ರಥಮ್ ಆಗಾಗ ಗಾಂಧಿನಗರದಲ್ಲೂ ಕಾಣಿಸಿಕೊಳ್ತಿದ್ದರು. ಹಾಗಾಗಿ, ಪ್ರಥಮ್ ಮಾತನ್ನ ಯಾರು ಸಿರಿಯಸ್…
Read more

ಕಿಲ್ಲರ್‌ ವೆಂಕಟೇಶ್‌ ಕಷ್ಟಕ್ಕೆ ನೆರವಾದ ದರ್ಶನ್‌

ಕಷ್ಟ ಪಟ್ಟು ಮೇಲೆ ಬಂದವ್ರಿಗೆ ಕಷ್ಟದ ಅರ್ಥ ನಿಜವಾಗಿಯೂ ಅರ್ಥವಾಗಿರುತ್ತೆ. ಬೇಕಿದ್ರೆ ಗಮನಿಸಿ ನೋಡಿ ಕಷ್ಟದಲ್ಲಿದ್ದವ್ರಿಗೆ ಹೆಚ್ಚಾಗಿ ಕಷ್ಟದಿಂದ ಮೇಲೆ ಬಂದವ್ರೇ ಕೈ ಹಿಡಿಯೋದು. ಇದಕ್ಕೆ ಮತ್ತೊಂದು ಉದಾಹರಣೆ ಅಂದ್ರೆ ಅದು ದರ್ಶನ್. ಹೌದು. 250 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆ ದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೂ ದುಡ್ಡಿಲ್ಲದೇ ಪರದಾಡ್ತಿದ್ದ ಹಿರಿಯ ಕಲಾವಿದನಿಗೆ ಮೊದಲು ನೆರವಾಗಿದ್ದು ನವರಸ ನಾಯಕ ಜಗ್ಗೇಶ್. ಕಿಲ್ಲರ್ ವೆಂಕಟೇಶ್ ಕಷ್ಟಕ್ಕೆ ಮರುಗಿದ ಜಗ್ಗೇಶ್ ಕಿಲ್ಲರ್ ವೆಂಕಟೇಶ್ ಅವ್ರನ್ನ ವಿಕ್ಟೋರಿಯಾ…
Read more

ಅಭಿಮಾನಿಗೆ ಅಭಯ ನೀಡಿದ ಅಪ್ಪು

ಪುನೀತ್ ರಾಜ್ ಕುಮಾರ್.. ಕೆಲವರ ಪಾಲಿಗೆ ನಾಯಕ. ಕೆಲವರ ಪಾಲಿಗೆ ಕಲಾಸೇವಕ. ಕೆಲವರಿಗೆ ಅಣ್ಣ.. ಕೆಲವರಿಗೆ ತಮ್ಮ. ಕೆಲವರಿಗೆ ಮಗ.. ಕೆಲವರಿಗೆ ಮೊಮ್ಮಗ. ಅಭಿಮಾನಿಗಳ ಅಭಿಮಾನವೇ ಪುನೀತ್ ಗೆ ಶ್ರೀ ರಕ್ಷೆ. ಅಭಿಮಾನಿಗಳ ಅಭಿಮಾನದ ಉತ್ಸವವೇ ಪುನೀತ್ ಗೆ ದೀಕ್ಷೆ. ಹಾಗಾಗೇ, ಅಭಿಮಾನಿಗಳಲ್ಲಿ ದೇವರನ್ನ ಕಾಣುವ ಅಭಿಮಾನಿಗಳನ್ನೇ ದೇವರೆನ್ನುವ ಅಪ್ಪು ಇದೀಗ ಅಭಿಮಾನಿಯ ಖಾಯಿಲೆಗೆ ಮಮ್ಮಲ ಮರಗಿದ್ದಾರೆ. ಅಭಿಮಾನಿಯ ಬಯಕೆಯನ್ನ ಈಡೇರಿಸಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಯ ಪ್ರಾಣ ಉಳಿಸಲು ಮುಂದಾಗಿದ್ಧಾರೆ. ಹೌದು, ತನ್ನ ಸ್ವಂತ ಶಕ್ತಿಯಿಂದ ನಡೆಯಲಾಗದ…
Read more