News & Views

ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಜುಲೈ 17 ಕ್ಕೆ ಕನ್ನಡದ ʼಲಾʼ ಸಿನಿಮಾ ರಿಲೀಸ್.

ಪುನೀತ್‌ ರಾಜ್‌ ಕುಮಾರ್‌ ಅವರ ಪಿಆರ್‌ ಕೆ ಪ್ರೊಡಕ್ಷನ್‌ ನಲ್ಲಿ ನಿರ್ಮಾಣಗೊಂಡಿರೋ ಕನ್ನಡದ ಬಹುನಿರೀಕ್ಷಿತ ʼಲಾʼ ಸಿನಿಮಾ  17 ಜುಲೈ  2020 ರಂದು ಅಮೆಜಾನ್‌ ಫ್ರೈಮ್‌ ನಲ್ಲಿ ಬಿಡುಗಡೆಯಾಗಲಿದೆ. ಕ್ರೈಂ ಥ್ರಿಲ್ಲರ್‌ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್‌ ಅಭಿನಯಿಸಿದ್ದಾರೆ.  ಈ ಸಿನಿಮಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ದ ಧ್ವನಿ ಎತ್ತಲಾಗಿದೆ. ಅಶ್ವಿನಿ ಪನೀತ್‌ ರಾಜ್‌ ಕುಮಾರ್‌, ಎಂ. ಗೋವಿಂದ ನಿರ್ಮಾಣದ ʼಲಾʼ ಸಿನಿಮಾವನ್ನು ರಘು ಸಮರ್ಥ ನಿರ್ದೇಶಿಸಿದ್ದಾರೆ. ರಾಗಿಣಿ…
Read more

ಆಲ್‌ರೌಂಡರ್‌ ಜೆಸ್ಸಿ

ಜಸ್ವಂತ್ ಮುರಳೀಧರ ಆಚಾರ್ಯ… ಗೆಳೆಯರ ಪಾಲಿಗೆ ಪ್ರೀತಿಯ ಜೆಸ್ಸಿ… ರಾಜ್ಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಜಸ್ವಂತ್ ಭರವಸೆಯ ಆಟಗಾರ. ಇತ್ತೀಚೆಗೆ ನಡೆದ ಕೆಎಸ್‍ಸಿಎ 2ನೇ ಗ್ರೂಪ್, ಫಸ್ಟ್ ಡಿವಿಷನ್ ಮ್ಯಾಚ್‍ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದರು. ಆರ್‍ಎಸ್‍ಐ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೈರುತ್ಯ ರೈಲ್ವೆ ತಂಡದ ಪರ ಮಿಂಚಿನ ಅಜೇಯ ಶತಕ ಕೂಡ ದಾಖಲಿಸಿದ್ದರು. ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ತಂಡದ ಅಗ್ರ ಕ್ರಮಾಂಕದ ಆಟಗಾರನಾಗಿರುವ ಜಸ್ವಂತ್ ಅವರ ಬ್ಯಾಟಿಂಗ್ ವೈಖರಿಗೆ ಎದುರಾಳಿ ನೈರುತ್ಯ…
Read more

ಮಾದೇಶ್ವರನ ಪಾದಕ್ಕೆ ಅಡ್ಡಬಿದ್ದ ವಿಜಿ

ʻಸಲಗʼ ದುನಿಯಾ ವಿಜಿ ಪಾಲಿಗೆ ಚರಿತ್ರೆ ಸೃಷ್ಟಿಸುವ ಅವತಾರವಾಗುತ್ತೆ ಅನ್ನುವ ನಂಬಿಕೆ ಗಾಂಧಿನಗರಕ್ಕಿದೆ. ಇದಕ್ಕೆ ತಕ್ಕಂತೆ ದುನಿಯಾ ವಿಜಿ ಸಲಗಕ್ಕಾಗಿ ಹಗಲಿರುಳು ಬೆವರು ಸುರಿಸಿ ಕೆಲಸ ಮಾಡ್ತಿದ್ದಾರೆ. ಯಾವ ವಿಚಾರದಲ್ಲೂ ಇಲ್ಲಿಯತನಕ ರಾಜಿಯಾಗದ ಕರಿಚಿರತೆ ವಿಜಿ ಇತ್ತೀಚಿಗಷ್ಟೇ ಮಲೇಶಿಯಾದ ಸಿಂಗರ್ ಯೋಗಿ ಅವರನ್ನ ಕನ್ನಡಕ್ಕೆ ಕರೆ ತಂದು, ಹಾಡೊಂದಕ್ಕೆ ದನಿಯಾಗಿಸಿದ್ದರು. ಮಲೇಶಿಯಾದ ತಮಿಳು ಮೂಲದ ಗಾಯಕ ಯೋಗಿ ಕಂಠ ಸಲಗಕ್ಕೆ ಇನ್ನಷ್ಟು ಶಕ್ತಿ ತುಂಬುತ್ತೆ ಎಂಬ ಭರವಸೆಯಲ್ಲೇ, ದುನಿಯಾ ವಿಜಿ ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆ…
Read more

ಟ್ಯಾಕ್ಸ್ ಉಳಿಸೋಕೆ ಇಲ್ಲಿದೆ ಸಖತ್ ಐಡಿಯಾ

ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವೆಷ್ಟು? ಎನ್ನುವುದನ್ನು ಅರಿಯುವುದರೊಂದಿಗೆ ನ್ಯಾಯಯುತವಾಗಿ ತೆರಿಗೆ ಉಳಿಸುವ ಪ್ರಕ್ರಿಯೆ ಆರಂಭಿಸಬಹುದು. ಇದಕ್ಕೆ ಮೊದಲು ನೀವು ಆದಾಯ ತೆರಿಗೆಯ ಮಿತಿಯನ್ನು ಅರಿಯಬೇಕು. ತೆರಿಗೆ ಮಿತಿಗೆ ಅನುಗಣವಾಗಿ ನೀವು ತೆರಿಗೆ ಉಳಿತಾಯಕ್ಕೆ ಯೋಜನೆ ರೂಪಿಸಬಹುದು. ಆದಾಯ ತೆರಿಗೆ ಮಿತಿಗಳು 2019-20 ಸಾಮಾನ್ಯ ನಾಗರಿಕರಿಗೆ (60 ವರ್ಷ ಒಳಪಟ್ಟು) ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ರ ಒಳಪಟ್ಟು) ಅತ್ಯಂತ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟು) ತೆರಿಗೆ ಸ್ಲ್ಯಾಬ್ ಗಳು ತೆರಿಗೆ…
Read more

ಗಾಂಧಿನಗರ ಗಾಸಿಪ್‌ : ಕೋಟಿಗೊಬ್ಬ-3

ಕೋಟಿಗೊಬ್ಬ-3 ಇದೀಗ ಗಾಂಧಿನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿರೋ ಸಿನಿಮಾ. ಕಿಚ್ಚ ಸುದೀಪ ಅಭಿನಯದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇ 1 ರಂದು ಕೋಟಿಗೊಬ್ಬ-3 ತೆರೆಗೆ ಬರಲು ಸಿದ್ದವಾಗ್ತಿದೆ. ಆದ್ರೆ ಇದೇ ಟೈಂನಲ್ಲಿ ಗಾಂಧಿನಗರದಲ್ಲಿ ಕೋಟಿಗೊಬ್ಬ ಬಗ್ಗೆ ಕೆಲ ಸ್ವಾರಸ್ಯಕರ ವಿಚಾರಗಳು ಕೇಳಿಬರ್ತಿದ್ದು, ಅವುಗಳನ್ನ ನಿಮ್ಮ ಮುಂದಿಡ್ತಿದ್ದೇವೆ. ಮೇ 1 ನೇ ತಾರೀಖು ಕೋಟಿಗೊಬ್ಬ-3 ರಿಲೀಸ್‌ ಆಗೋದೇ ಡೌಟು ಅನ್ನೋದು ಮೊದಲನೇ ವಿಚಾರ. ಗಾಂಧಿನಗರದ ಮಂದಿಯ ಪ್ರಕಾರ ಕೋಟಿಗೊಬ್ಬ-3…
Read more

ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾ ಸ್ಥಾಪನೆ

ಬೆಂಗಳೂರು: ಭ್ರಷ್ಟಾಚಾರಕ್ಕಿಂತ ದೊಡ್ಡ ಪಿಡುಗು ಅನಾರೋಗ್ಯ ಆಗಿದ್ದು, ಈ ಬಗ್ಗೆ ಸಂಶೋಧನೆ ಮತ್ತು ಸಮಸ್ಯೆ ನಿವಾರಿಸಲು ಪ್ರಾಧಿಕಾರ ರಚಿಸುವ ಅವಶ್ಯಕತೆ ಇದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿದರು. ನಗರದಲ್ಲಿಂದು ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇಂದು ಪಟ್ಟಣ ಮಾತ್ರವಲ್ಲ ಗ್ರಾಮೀಣ…
Read more

ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ..?

ಸಾಲದ ಅಗತ್ಯ ಯಾರಿಗೆ ಯಾವ ಸಂದರ್ಭದಲ್ಲಿ ಬರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಸಾಲದ ತುರ್ತಿಗೆ ಬೀಳುವ ಮಂದಿ ಪೂರ್ವಾಪರ ಯೋಚನೆ ಮಾಡದೆ ಕೆಟ್ಟ ಮೂಲಗಳಿಂದ ಕೆಟ್ಟ ಸಾಲ ಪಡೆದುಕೊಳ್ಳುತ್ತಾರೆ. ಹೀಗೆ ಚಕ್ರಬಡ್ಡಿ ಲೆಕ್ಕಾಚಾರದವರಿಂದ ಕೈ ಸಾಲ ಮಾಡಿದಾಗ ಆ ಸಾಲದಿಂದ ಅನುಕೂಲವಾಗುವುದಕ್ಕಿಂತ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೌದು ಸಾಲ ತೆಗೆದುಕೊಳ್ಳುವಾಗ ಸರಿಯಾದ ವ್ಯಕ್ತಿಗಳಿಂದ , ಸರಿಯಾದ ಸಂಸ್ಥೆಗಳಿಂದ ಸಾಲ ಪಡೆಯುವುದು ಬಹಳ ಮುಖ್ಯ . ತುರ್ತು ಅಗತ್ಯ ಅಂತ ಬಂದಾಗ ನಮ್ಮ ಮನೆಯಲ್ಲಿರುವ ಕೆಲ ದಾಖಲೆಗಳೇ…
Read more

ನಿಖಿಲ್‌-ರೇವತಿ ವಿವಾಹ ಆಹ್ವಾನ ಪತ್ರಿಕೆ ಹೇಗಿದೆ..!

ಏಪ್ರಿಲ್ ೧೭ ರಂದು ನಡೆಯಲಿರುವ ಮಾಜಿ ಸಿಎಂ ಹೆಚ್ .ಡಿ‌.ಕುಮಾರಸ್ವಾಮಿ ಪುತ್ರನ ಮದುವೆಗೆ ಈಗಾಗಲೇ ಭರ್ಜರಿ ಸಿದ್ದತೆ ನಡೆದಿದೆ. ನಿಖಿಲ್‌-ರೇವತಿ ಕಲ್ಯಾಣದ ಆಹ್ವಾನ ಪತ್ರಿಕೆ ಸಿದ್ಧವಾಗಿದ್ದು, ಮದುವೆಯ ಕರೆಯೋಲೆ ಅದಿತಿ ಲಿಂಕ್‌ ಮೀಡಿಯಾಗೆ ಲಭ್ಯವಾಗಿದೆ. ನಿಖಿಲ್ ಮತ್ತು ರೇವತಿ ಮದುವೆ ಮೈಸೂರು ರಸ್ತೆ ರಾಮನಗರದಲ್ಲಿ ನಡೆಯಲಿದೆ. ಪುತ್ರನ ಮದುವೆಗೆ ಸಪ್ತಪದಿ ಹೆಸರಿನಲ್ಲಿ ಅದ್ದೂರಿ ಸೆಟ್ ಹಾಕಿಸಲಿರೋ ಮಾಜಿ ಸಿಎಂ ಹೆಚ್.ಡಿ.ಕೆಮದುವೆ ಕಾರ್ಡ್‌ನಲ್ಲೇ ರಾಜಕೀಯ ಕರ್ಮಭೂಮಿ ರಾಮನಗರದಲ್ಲೇ ಪುತ್ರನ ಮದುವೆ ಯಾಕೆ ಎಂದು ಸುಧೀರ್ಘ ವಿವರಣೆ ಸಹಿತ ಮದುವೆ…
Read more

ಅಯ್ಯಪ್ಪ ಮಾಲೆ ಧರಿಸಿದ ಶಿವಣ್ಣ

ಕಳೆದ ಕೆಲ ವರ್ಷಗಳನ್ನ ಹೊರತುಪಡಿಸಿದ್ರೆ ಪ್ರತೀ ವರ್ಷ ಅದ್ಯಾವುದ್ದೇ ಚಿತ್ರ ಒಪ್ಪಿಕೊಂಡಿದ್ದರೂ, ಅದೇನೇ ಬ್ಯುಸಿಯಾಗಿದ್ದರೂ, ಅದೆಷ್ಟೇ ಒತ್ತಡವಿದ್ದರೂ, ಮಾಲೆ ಧರಿಸಿ ವ್ರತ ಮಾಡಿ ಭಯ ಭಕ್ತಿಯಿಂದಲೇ ಮಲೆಯೇರಿ ಅಯ್ಯಪ್ಪನ ದರ್ಶನ ಪಡೆದು ಬರುವ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಇಂದು ಬೆಳ್ಳಿಗ್ಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಅಯ್ಯಪ್ಪ ಮಾಲೆ ಧರಿಸಿದ್ದಾರೆ. ನಿರ್ದೇಶಕ ರಘುರಾಮ್ ಹಾಗೂ ಸ್ನೇಹಿತರ ಜೊತೆಯಲ್ಲಿ ಇಂದು ಮಾಲೆ ಧರಿಸಿರುವ ಶಿವಣ್ಣ ಮಾರ್ಚ್ 14 ರಂದು ಶಬರಿಮಲೆಗೆ ತೆರಳಿ ಅಯ್ಯಪ್ಪ…
Read more

ಮತ್ತೆ ಒಂದಾಗುತ್ತಾ ಈ ಜೋಡಿ..! ಚಿತ್ರರಂಗಕ್ಕೆ ಮರಳುತ್ತಾರಾ, ಮೋಹಕ ತಾರೆ..!

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿರಲಿಲ್ಲ. ಇದಕ್ಕೆ ತಕ್ಕಂತೆ ರಮ್ಯಾ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿ ಒಂದು ವರ್ಷಗಳೇ ಕಳೆಯುತ್ತಿವೆ. ಇದ್ರ ನಡುವೆ ಇದೀಗ ರಮ್ಯಾ ಏಕಾಏಕಿ ಜಗ್ಗೇಶ್ಗೆ ನೆನಪಾಗಿದ್ದಾರೆ. ಹೌದು. ಪೂರ್ವಾಶ್ರಮದಲ್ಲಿ ರಮ್ಯಾ ನಟಿಯಾಗಿದ್ದರಲ್ಲಾ..? ಆ ಕಾಲದಲ್ಲಿ ಒಂದು ವಿವಾದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನೀರ್ ದೋಸೆ ಚಿತ್ರದ…
Read more