ಗಾಂಧಿನಗರ ಗಾಸಿಪ್‌ : ಕೋಟಿಗೊಬ್ಬ-3

ಗಾಂಧಿನಗರ ಗಾಸಿಪ್‌ : ಕೋಟಿಗೊಬ್ಬ-3

ಕೋಟಿಗೊಬ್ಬ-3 ಇದೀಗ ಗಾಂಧಿನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿರೋ ಸಿನಿಮಾ. ಕಿಚ್ಚ ಸುದೀಪ ಅಭಿನಯದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇ 1 ರಂದು ಕೋಟಿಗೊಬ್ಬ-3 ತೆರೆಗೆ ಬರಲು ಸಿದ್ದವಾಗ್ತಿದೆ. ಆದ್ರೆ ಇದೇ ಟೈಂನಲ್ಲಿ ಗಾಂಧಿನಗರದಲ್ಲಿ ಕೋಟಿಗೊಬ್ಬ ಬಗ್ಗೆ ಕೆಲ ಸ್ವಾರಸ್ಯಕರ ವಿಚಾರಗಳು ಕೇಳಿಬರ್ತಿದ್ದು, ಅವುಗಳನ್ನ ನಿಮ್ಮ ಮುಂದಿಡ್ತಿದ್ದೇವೆ. ಮೇ 1 ನೇ ತಾರೀಖು ಕೋಟಿಗೊಬ್ಬ-3 ರಿಲೀಸ್‌ ಆಗೋದೇ ಡೌಟು ಅನ್ನೋದು ಮೊದಲನೇ ವಿಚಾರ. ಗಾಂಧಿನಗರದ ಮಂದಿಯ ಪ್ರಕಾರ ಕೋಟಿಗೊಬ್ಬ-3 ಪಿಂಕ್‌ ಸುಂದರಿಯ ಸುಳಿಯಲ್ಲಿ ಸಿಲುಕಿದ್ದಾನಂತೆ. ಹಾಗಂದ್ರೇನು ಅಂತೀರಾ, ಕೋಟಿಗೊಬ್ಬ ಸದ್ಯ ಹಣಕಾಸಿನ ಕೊರತೆಯನ್ನ ಎದುರಿಸುತ್ತಿದೆಯಂತೆ. ಕೋಟಿಗೊಬ್ಬ-3 ಸಾಮಾನ್ಯ ಬಜೆಟ್‌ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಲ್ಲ. ಕೋಟಿಕೋಟಿ ಹಣವನ್ನ ಕೋಟಿಗೊಬ್ಬನ ಕೋಟೆಯ ಮೇಲೆ ಈಗಾಗ್ಲೇ ಸುರಿಯಲಾಗಿದೆ. ಬೆಲ್‌ ಗ್ರೇಡ್‌, ಸರ್ಬಿಯಾ ಸೇರಿದಂತೆ ವಿದೇಶದ ನಾನಾ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಶ್ರದ್ಧಾ ದಾಸ್‌, ಆಫ್ತಾಬ್‌ ಶಿವದಾಸಿನಿಯಂತಹ ಬಾಲಿವುಡ್‌ ಕಲಾವಿದರು ಕೋಟಿಗೊಬ್ಬ ಚಿತ್ರದಲ್ಲಿದ್ದಾರೆ. ಅಂದುಕೊಂಡದಕ್ಕಿಂತ ಹೆಚ್ಚು ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿರುವ ಕಾರಣ ಕೋಟಿಗೊಬ್ಬನ ಖಜಾನೆ ಬಿಡುಗಡೆಗೂ ಮುನ್ನವೇ ಖಾಲಿಯಾಗಿದೆಯಂತೆ. ಇನ್ನು ಗಾಂಧಿನಗರದ ಮಂದಿಯ ಪ್ರಕಾರ ಕೋಟಿಗೊಬ್ಬ -3 ಗೆ ಕಿಚ್ಚ ಸುದೀಪ ಇನ್ನೂ ಡಬ್ಬಿಂಗ್‌ ಮಾಡಿಲ್ಲ. ಇದಕ್ಕೆ ಪ್ರಮುಖ ಕಾರಣ ಅವರ ಸಂಭಾವನೆಯನ್ನ ನಿರ್ಮಾಪಕರು ಬಾಕಿ ಉಳಿಸಿಕೊಂಡಿರೋದಂತೆ. ಇನ್ನು ಶೇ 50% ಸಂಭಾವನೆ ಬಾಕಿ ಇರೋದ್ರಿಂದ ಪೂರ್ತಿ ಹಣ ಕೈ ಸೇರೋವರೆಗೂ ಕಿಚ್ಚ ಡಬ್ಬಿಂಗ್‌ ಮಾಡದಿರಲು ನಿರ್ಧರಿಸಿದ್ದಾರೆ. ಹಾಗಾಗಿಯೇ ಅವರು ಫ್ಯಾಂಟಮ್‌ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ. ಮೂರನೇ ವಿಚಾರ ನಿರ್ಮಾಪಕ ಸೂರಪ್ಪ ಬಾಬು ಮತ್ತು ಸುದೀಪ ನಡುವಿನ ಮುನಿಸಿನ ಕಾರಣ ಕೋಟಿಗೊಬ್ಬ -3 ಇನ್‌ ಟೈಂಗೆ ಥಿಯೇಟರ್‌ ಗೆ ಬರೋದು ಡೌಟು ಅಂತಲೇ ಹೇಳಲಾಗ್ತಿದೆ. ಈ ನಡುವೆಯೇ ಮತ್ತೊಂದು ಮೂಲದಿಂದ ಸದ್ಯದಲ್ಲೇ ಕೋಟಿಗೊಬ್ಬ-3 ಚಿತ್ರಕ್ಕೆ ಎದುರಾಗಿರೋ ಫೈನಾನ್ಸ್‌ ಪ್ರಾಬ್ಲಂ ಮುಗಿಯುತ್ತೆ, ಸುದೀಪ ತಮ್ಮ ಪಾತ್ರಕ್ಕೆ ಸದ್ಯದಲ್ಲೇ ಡಬ್ಬಿಂಗ್‌ ಮಾಡ್ತಾರೆ ಅನ್ನೋ ವಿಶ್ವಾಸವನ್ನೂ ಇದೇ ವೇಳೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದ್ರೆ, ಮೇ 1 ಕ್ಕೆ ಕೋಟಿಗೊಬ್ಬ ತೆರೆ ಮೇಲೆ ಬರುತ್ತಾ..? ಗೊತ್ತಿಲ್ಲ..? ಅಂತ ಅಡ್ಡಗೋಡೆಯ ಮೇಲೆ ದೀಪ ಇಡ್ತಿದ್ದಾರೆ ಗಾಂಧಿನಗರದ ಮಂದಿ. ಹೀಗೆ ಕೋಟಿಗೊಬ್ಬ-3 ಬಗ್ಗೆ ಹಲವು ಗಾಸಿಪ್‌ ಗಳು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿವೆ. ಇದು ಕೋಟಿಗೊಬ್ಬನ ಬಗ್ಗೆ ಅಪಪ್ರಚಾರವಾ.? ಅಥವಾ ಇದೆಲ್ಲಾ ನಿಜಾನಾ.? ಅನ್ನೋದಕ್ಕೆ ಚಿತ್ರತಂಡವೇ ಉತ್ತರಸೋ ಮೂಲಕ ಗಾಂಧಿನಗರದಲ್ಲಿ ಹರಿದಾಡ್ತಿರೋ ಸುದ್ದಿಗಳಿಗೆ ಬ್ರೇಕ್‌ ಹಾಕಬೇಕಿದೆ.

 

Leave a Reply

Your email address will not be published. Required fields are marked *