`ಫ್ರೆಂಚ್‌ ಬಿರಿಯಾನಿ’ ಟ್ರೇಲರ್‌ ರಿಲೀಸ್‌.

`ಫ್ರೆಂಚ್‌ ಬಿರಿಯಾನಿ’ ಟ್ರೇಲರ್‌ ರಿಲೀಸ್‌.

ಬಹು ನಿರೀಕ್ಷಿತ ಕನ್ನಡದ ಫ್ರೆಂಚ್‌ ಬಿರಿಯಾನಿ ಚಿತ್ರದ ಟ್ರೇಲರ್‌ನ್ನ ಅಮೆಜಾನ್‌ ಪ್ರೈಮ್‌ ಇಂದು ಬಿಡುಗಡೆ ಮಾಡಿದೆ. ಪುನೀತ್‌ ರಾಜ್‌ಕುಮಾರ್‌ರವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಗುರುದತ್‌ ಎ ತಲ್ವಾರ್‌ ನಿರ್ಮಾಣದ ಈ ಚಿತ್ರಕ್ಕೆ ಪನ್ನಾಗಭರಣರವರ ನಿರ್ದೇಶನವಿದ್ದು, ಡ್ಯಾನಿಶ್‌ ಸೇಠ್‌, ಸಾಲ್‌ ಯೂಸುಫ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಫ್ರೆಂಚ್‌ ಬಿರಿಯಾನಿ ಚಿತ್ರ ಇದೇ ಜುಲೈ 24 ರಂದು ಅಮೆಜಾನ್‌ ಪ್ರೈಮ್‌ ವಿಡಿಯೋ ದಲ್ಲಿ ಬಿಡುಗಡೆಯಾಗಲಿದೆ.

ಡ್ರಾಮಾ, ಆಕ್ಷನ್‌ ಮತ್ತು ಕಾಮೆಡಿ ಒಳಗೊಂಡಿರುವ ಈ ಚಿತ್ರದಲ್ಲಿ ಡ್ಯಾನಿಶ್ ಸೇಠ್‌ ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕ ಆಸ್ಗರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಸೈಮನ್‌ ಪಾತ್ರದಲ್ಲಿ ಸಾಲ್ ಯೂಸುಫ್ ಅಭಿನಯಿಸಿದ್ದಾರೆ. ಕಳೆದುಹೋದ ಸಮಾರನ್ನ ಹುಡುಕುವಾಗ ಸೈಮನ್‌ ಮತ್ತು ಆಸ್ಗರ್‌ ಎರಡೂ ಪಾತ್ರಗಳು ಪರಿಚಯವಾಗಲಿದ್ದು, ನಂತರದ ಬೆಳವಣಿಗೆಗಳು ಕುತೂಹಲ ಮೂಡಿಸಲಿದೆ. ಫ್ರೆಂಚ್‌ ಬಿರಿಯಾನಿ ಚಿತ್ರ ಜುಲೈ 24 ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ 200  ಕ್ಕೂ ಹೆಚ್ಚು ದೇಶಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.

Trailer out now: https://youtu.be/ew9t4JX4x3A

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಫ್ರೆಂಚ್ ಬಿರಿಯಾನಿಯನ್ನು ತರಲು ನಾವು ಉತ್ಸುಕರಾಗಿದ್ದೇವೆ. ಡ್ಯಾನಿಶ್‌ ಸೇಠ್‌ ಅಭಿನಯದ ಈ ಚಿತ್ರದಲ್ಲಿ ಸ್ಥಳೀಯ ವಿಚಾರಗಳು ಪ್ರಮುಖವಾಗಿ ಕಾಣಿಸಿಕೊಂಡಿರುವುದರಿಂದ ಖಂಡಿತ ಈ ಚಿತ್ರ ವೀಕ್ಷಕರನ್ನ ಆಕರ್ಷಿಸುತ್ತದೆ. ಚಿತ್ರದಲ್ಲಿ ಹಾಸ್ಯ ದೃಶ್ಯಗಳು ಖಂಡಿತ ಚಿತ್ರರಸಿಕರನ್ನ ಮನರಂಜಿಸುತ್ತದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾದ ನಿರ್ದೇಶಕ ವಿಜಯ್ ಸುಬ್ರಮಣ್ಯಂ ಹೇಳಿದರು.
ಫ್ರೆಂಚ್‌ ಬಿರಿಯಾನಿ ಚಿತ್ರ ಬಿಡುಗಡೆ ಬಗ್ಗೆ ಬಹಳ ಕುತೂಹಲದಿಂದ್ದೇವೆ. ನಮ್ಮ ವೀಕ್ಷಕರಿಗೆ ಆಕ್ಷನ್‌ ಪ್ಯಾಕ್ಡ್‌ ಕಾಮಿಡಿ ಥ್ರಿಲ್ಲರ್‌ ನ್ನ ನೀಡಲು ನಾವು ಈ ಚಿತ್ರದಲ್ಲಿ ಪ್ರಯತ್ನಿಸಿದ್ದೇವೆ. ಡ್ಯಾನಿಶ್‌ ಸೇಠ್‌ ಮತ್ತು ಸಾಲ್‌ ಯೂಸುಫ್‌ ರವರ ಪಾತ್ರಗಳು ಬಹಳ ಚೆನ್ನಾಗಿ ಮೂಡಿಬಂದಿದ್ದು, ಆ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಅಮೆಜಾನ್‌ ಪ್ರೈಮ್‌ ಮೂಲಕ ಫ್ರೆಂಚ್‌ ಬಿರಿಯಾನಿ ಏಕಕಾಲದಲ್ಲಿ 200 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗ್ತಿರೋದು ಸಹ ಸಂತಸದ ವಿಚಾರ ಎಂದು ಚಿತ್ರದ ನಿರ್ದೇಶಕ ಪನ್ನಾಗಭರಣ ಹೇಳಿದ್ದಾರೆ. 
ಸಿನಿಮಾ ಒಂದು ಮನರಂಜನೆ. ಪಿಆರ್‌ಕೆ ಪ್ರೊಡಕ್ಷನ್‌ ನಲ್ಲಿ ನಾವು ವೀಕ್ಷಕರ ಮನರಂಜಿಸುವ ಸಿನಿಮಾಗಳನ್ನ ನೀಡುತ್ತಾ ಬಂದಿದ್ದೇವೆ. ಉತ್ತಮ ನಿರೂಪಣೆ ಮತ್ತು ಹಾಸ್ಯದ ಮೂಲಕ ಪ್ರೇಕ್ಷಕರನ್ನ ನಗಿಸಲು ಸಾಧ್ಯವಾದರೆ ಅದೇ ಗೆಲುವು. ಫ್ರೆಂಚ್‌ ಬಿರಿಯಾನಿ ಕನ್ನಡದ ಉತ್ತಮ ಮನರಂಜನಾ ಚಿತ್ರಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಚಿತ್ರದ ನಿರ್ಮಾಪಕರಾದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌. 
ಚಿತ್ರದ ಸಾರಾಂಶ:
 ಫ್ರೆಂಚ್ ಬಿರಿಯಾನಿ ಫ್ರಾನ್ಸ್‌ನ ಔಷಧೀಯ ಕಂಪನಿಯ ಪ್ರತಿನಿಧಿ ಸೈಮನ್ ಮತ್ತು ಶಿವಾಜಿನಗರದ ಸ್ಥಳೀಯ ಆಟೋ ಚಾಲಕ ಅಸ್ಗರ್ ಅವರ ಬೆಂಗಳೂರಿನಲ್ಲಿ ಎರಡು ದಿನಗಳ ಸುದೀರ್ಘ ಪ್ರಯಾಣವನ್ನು ಹಂಚಿಕೊಂಡ ಕಥೆ. ಪ್ರಯಾಣದ ವೇಳೆ ನಡೆಯುವ ಘಟನೆಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ. ಫ್ರೆಂಚ್ ಬಿರಿಯಾನಿ ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 

 Trailer Link : http://amzn.to/FBTrailer  
 

Leave a Reply

Your email address will not be published. Required fields are marked *