ಚಿತ್ರಕಲಾ ಪರಿಷತ್ ನಲ್ಲಿ ಅರ್ಬನ್ ಬಜಾರ್ 2020

ಚಿತ್ರಕಲಾ ಪರಿಷತ್ ನಲ್ಲಿ ಅರ್ಬನ್ ಬಜಾರ್ 2020

ನೀವು ನಿಮ್ಮ ಕನಸಿನ ಮನೆಯನ್ನು ಅದ್ಭುತವಾಗಿ ಕಾಣುವಂತೆ ಡೆಕೋರೇಟ್ ಮಾಡಬೇಕು ಅಂದುಕೊಂಡಿದ್ಕೊದೀರಾ… ನಿಮಗೆ ಮನೆಯ ಅಲಂಕಾರದ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆಯಾ ? ವಿಶೇಷ ವಿನ್ಯಾಸಗಳ ಆಭರಣಗಳನ್ನು ನೀವು ಬಹಳ ಇಷ್ಟಪಡ್ತೀರಾ ? ಟ್ರೆಂಡಿ ಫ್ಯಾಷನ್ ಡ್ರೆಸ್ ಗಳನ್ನ ಕೊಂಡುಕೊಳ್ಳಬೇಕಾ..? ಹಾಗಾದ್ರೆ ನೀವು ಒಂದು ಸಲ ಬೆಂಗಳೂರಿನ ಚಿತ್ರಕಲಾ ಪರಿಷತ್ ಗೆ ಹೋಗಿ ಬರಲೇ ಬೇಕು… ಅಲ್ಲಿ ಒಂದೇ ಸೂರಿನಡಿ ನಿಮಗೆ ಇಷ್ಟವಾಗೋ ವಸ್ತುಗಳು, ಉತ್ಪನ್ನಗಳು, ಕಲಾಕೃತಿಗಳು ಸಿಗುತ್ತಿವೆ.


ಹೌದು, ಒಂದೇ ಸೂರಿನಡಿಯಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು…ವಿನೂತನ ಶೈಲಿಯ ಕಲಾ ಉತ್ಪನ್ನಗಳು… ವಿವಿಧತೆಯಲ್ಲಿ ಏಕತೆ ಸಾರುವಂತಹ ಕಲಾ ಪ್ರಪಂಚವೇ ಚಿತ್ರಕಲಾ ಪರಿಷತ್ನಲ್ಲಿ ಅನಾವರಣಗೊಂಡಿದೆ. ಜೈಪುರ, ಗುಜರಾತ್, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಕಲಾವಿದರು ಈ ಮಾರಾಟ ಮೇಳ ಮತ್ತು ಕರಕುಶಲ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಮೇಳದಲ್ಲಿ ನಿಮ್ಮ ಕನಸಿನ ಮನೆಯನ್ನು ಅಲಂಕಾರ ಮಾಡುವಂತಹ ಉತ್ಪನ್ನಗಳು, ಹ್ಯಾಂಡ್ ಲೂಮ್ ಬಟ್ಟೆಗಳು, ಮಹಿಳೆಯರು, ಮಕ್ಕಳು ಮತ್ತು ಪುರುಷರ ಸಿದ್ಧ ಉಡುಪುಗಳು, ಮರದ ಆಟಿಕೆಗಳು, ಪೀಠೋಪಕರಣಗಳು, ಮಹಿಳೆಯರ ಅಚ್ಚುಮೆಚ್ಚಿನ ಅಭರಣಗಳು, ಬೆಡ್ ಲೈನೆನ್, ವಿವಿಧ ಸಂಸ್ಕೃತಿಯನ್ನು ಸಾರುವಂತಹ ಕಲಾಕೃತಿಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ಹಲವಾರು ವಿಭಿನ್ನ ಮಾದರಿಯ, ವಿನೂತನ ವಿನ್ಯಾಸಗಳ ವಸ್ತುಗಳು ಲಭ್ಯವಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಒಂದೇ ಸೂರಿನಡಿಯಲ್ಲಿ ನೂರಕ್ಕೂ ಅಧಿಕ ಮಳಿಗೆಗಳ ಮೂಲಕ ಕಲಾಕಾರರ ಕಲಾಕೃತಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುರುವಾರ ಅರ್ಬನ್ ಬಜಾರ್ 2020 ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಖಾತ್ಯ ಗಾಯಕಿ ಅನುರಾಧ ಭಟ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮಮತ ದೇವರಾಜ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ರು.
ಜನವರಿ 24 ರಿಂದ ಫೆಬ್ರವರಿ 2ರವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯಲಿರುವ ಅರ್ಬನ್ ಬಜಾರ್ 2020ಯಲ್ಲಿ ಸಖತ್ತಾಗಿಯೇ ಶಾಪಿಂಗ್ ಮಾಡಬಹುದು. ಬೆಳಗ್ಗೆ 11 ರಿಂದ ಸಂಜೆ 7ರವರೆಗೆ ಈ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಇಲ್ಲಿ ಪರಿಣತ ಕರಕುಶಲಕರ್ಮಿಗಳಿಂದ ವಿಶೇಷ ಕಾರ್ಯಾಗಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುತ್ತಾ, ನಿಮಗಿಷ್ಟವಾದ ವಸ್ತುಗಳ ಶಾಪಿಂಗ್ ಸಹ ಮಾಡಬಹುದು.

Leave a Reply

Your email address will not be published. Required fields are marked *