ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ವಾರ್ನಿಂಗ್.
ಬಿಗ್ ಬಾಸ್ ಮನೆಯಲ್ಲಿ ಕೆಲ ಸದಸ್ಯರು ಚಾಪೆ ಕೆಳಗೆ ದೂರುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ 67 ಕ್ಯಾಮೆರಾಗಳ ಮೂಲಕ ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಗ್ ಬಾಸ್ ಗೆ ರಂಗೋಲಿ ಕೆಳಗೆ ದೂರೋದಕ್ಕೆ ಆಗೋದಿಲ್ವ..! ನೀವು ಹೀಗೆ ಮುಂದುವರೆದರೆ ಸರಿಯಾಗಿರೋದಿಲ್ಲ ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಗಾಗಿ ಬಿಗ್ ಬಾಸ್ ವೇದಿಕೆ ಮೇಲೆ ಬರುತ್ತಿದ್ದಂತೆ ಸುದೀಪ್ ಮಾತನಾಡಿದ್ದು ಬಿಗ್ ಬಾಸ್ ರೂಲ್ಸ್ ಗಳ ಬಗ್ಗೆ ಸಂಜ್ಞೆ ಭಾಷೆ, ಸೈನ್ ಲಾಂಗ್ವೇಜ್ ಮೂಲಕ ಮನೆಯಲ್ಲಿ ಕೆಲವರು ಮಾತನಾಡಿರುವುದರ ಬಗ್ಗೆ ಡಿಸ್ಕಶನ್ ಇರುತ್ತೆ ಅಂತ ಹಿಂಟ್ ಕೊಟ್ಟರು.
ಅದಾದ ಮೇಲೆ ಮನೆಯೊಳಕ್ಕೆ ಹೋದ ಸುದೀಪ್, ಶೈನ್ ಮತ್ತು ದೀಪಿಕಾ ಹಾಕಿದ್ದ ಬ್ಲಾಕ್ ಅಂಡ್ ವೈಟ್ ಡ್ರೆಸ್ ಬಗ್ಗೆ ಕಿಚಾಯಿಸಿದರು. ನಂತರ ಅವರು ತೆಗೆದುಕೊಂಡಿದ್ದು ಸಂಜ್ಞೆ ಭಾಷೆಯ ವಿಷಯ. ನೋ ಟಾಲರೆನ್ಸ್ ವಾರದಲ್ಲಿ ನಿಯಮ ಉಲ್ಲಂಘನೆ ಮಾಡಿ ಮನೆಯ ವಸ್ತುಗಳನ್ನು ಕಳೆದುಕೊಂಡಿದ್ದೀರಿ. ಕೆಲವರು ಗಮನವಿಟ್ಟು ಕೇಳಿ, ಬಿಗ್ ಬಾಸ್ ಕೆಲವು ವಿಚಾರಗಳಲ್ಲಿ ಸೀರಿಯಸ್ ಆಗಿದಿದ್ದರೆ, ಇನ್ನೂ ತುಂಬಾ ಕಳೆದುಕೊಳ್ಳುತ್ತಿದ್ದಿರಿ. ತುಂಬಾ ದಿನಗಳಿಂದ ಮನೆಯಲ್ಲಿ ಒಂದು ವಿಚಾರ ನಡೆಯುತ್ತಾ ಇದೆ. ಅದು ನಿಯಮ ಉಲ್ಲಂಘನೆ ವಿಚಾರ ಅಂತ ಹೇಳಿ, ಅದೇನು ಎಂದು ಹೇಳುವಂತೆ ವಾಸುಕಿ ವೈಭವ್ಗೆ ಸೂಚಿಸಿದರು. ಆಗ ವಾಸುಕಿ, ಈ ಮನೆಯಲ್ಲಿ ಪಿಸುಗುಡಬಾರದು, ಕೈಯಲ್ಲಿ ಬರೆದು ತೋರಿಸಬಾರದು ಎಂದರು.
ಆಗ ಸುದೀಪ್ ಮಾತನಾಡಿ, ಸಂಜ್ಞೆ ಭಾಷೆಯ ಮೂಲಕ ಮಾತನಾಡೋದು ಈ ಮನೆಯ ಮೂಲ ನಿಯಮ ಉಲ್ಲಂಘನೆ. ಮನೆಯಲ್ಲಿ ಬಹಳಷ್ಟು ತೀರ್ಮಾನಗಳು ಕಣ್ಣ ಸಂಜ್ಞೆಯಲ್ಲೇ ನಡೆಯುತ್ತಿವೆ ಎಂದು ಹೇಳಿದರು. ಆ ನಂತರ ಮನೆಯಲ್ಲಿ ಯಾರ್ಯಾರು ಸಂಜ್ಞೆ ಭಾಷೆ ಬಳಸುತ್ತಿದ್ದಾರೆ ಎಂದು ಮನೆಯ ಸದಸ್ಯರನ್ನೇ ಕೇಳಿದರು. ಆಗ ಎಲ್ಲರೂ ತೆಗೆದುಕೊಂಡದ್ದು ಶೈನ್ ಶೆಟ್ಟಿ, ವಾಸುಕಿ ವೈಭವ್, ಚಂದನಾ ಮತ್ತು ಭೂಮಿಶೆಟ್ಟಿ ಹೆಸರುಗಳನ್ನ.
ಇದಕ್ಕೆ ಉತ್ತರಿಸಿದ ಶೈನ್, ತಾವು ಹಾಗೆ ಮಾಡಿದ್ದು ಹೌದು, ಬ್ಯಾಡ್ ವರ್ಡ್ ಅನ್ನುವ ಕಾರಣಕ್ಕೆ ಬರೆದು ತೋರಿಸದೆ ಎಂದರು. ಆದರೆ, ನಾಮನೇಶನ್ ವಿಚಾರ ಕಮ್ಯೂನಿಕೇಟ್ ಮಾಡಲಿಲ್ಲ ಅಂತ ಹೇಳಿದರು. ನಂತರ ವಾಸುಕಿ ಮಾತನಾಡಿ, ನಾನು ಯಾವತ್ತೂ, ಯಾರೊಂದಿಗೂ ಸಂಜ್ಞೆ ಮೂಲಕ ಯಾವುದೇ ಕಮ್ಯೂನಿಕೇಶನ್ ನಡೆಸಿಲ್ಲ ಎಂದರು. ಇನ್ನು ¨S್ಪ್ಮಚಿಜಿ ಭೂಮಿ ಮತ್ತು ಚಂದನಾ ಮಾತನಾಡಿ, ಬ್ಯಾಡ್ ವರ್ಡ್ ಎನ್ನುವ ಕಾರಣಕ್ಕೆ ಶೈನ್ ಬರೆದು ತೋರಿಸರೇ ವಿನಃ ನಾಮಿನೇಶನ್ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಹೇಳಿದರು.
ಎಲ್ಲರ ಉತ್ತರ ಪಡೆದ ನಂತರ ಕಿಚ್ಚ ಸುದೀಪ ಮಾತನಾಡಿ, ಇದು ಕೇವಲ ಇಬ್ಬರಿಗೆ ಸಂಬಂಧಪಟ್ಟದ್ದಲ್ಲ. ಬಹುತೇಕರು ಇದನ್ನು ಮಾಡುತ್ತಿದ್ದಾರೆ. ನೀವು ಯಾರ್ಯಾರ ಹೆಸರು ತಗೊಂಡರೋ ಅವರೇ ಇನ್ವಾಲ್ವಾ ಆಗಿರಬೇಕು ಅಂತಷ್ಟೇ ಅಲ್ಲ, ಬೇರೆಯವರು ಆಗಿರಬಹುದು. ಈ ನಿಯಮ ಉಲ್ಲಂಘನೆಯನ್ನು ಬಿಗ್ ಬಾಸ್ ಸೀರಿಯಸ್ ಆಗಿ ತೆಗೆದುಕೊಂಡರೆ ನೀವು ಬಹಳ ನಷ್ಟಕ್ಕೆ ಒಳಗಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.