ಭೀಮಸೇನ ನಳಮಹರಾಜ ಮೋಷನ್‌ ಪೋಸ್ಟರ್‌ ರಿಲೀಸ್‌

ಭೀಮಸೇನ ನಳಮಹರಾಜ ಮೋಷನ್‌ ಪೋಸ್ಟರ್‌ ರಿಲೀಸ್‌

ಕನ್ನಡ ಬಹುನಿರೀಕ್ಷಿತ ಚಿತ್ರ ಭೀಮಸೇನ ನಳಮಹರಾಜ ಸಿನಿಮಾದ ಮೋಷನ್‌ ಪೋಸ್ಟರ್‌ ನ್ನ ಅಮೆಜಾನ್‌ ಪ್ರೈಮ್‌ ವಿಡಿಯೋ ಇಂದು ರಿಲೀಸ್‌ ಮಾಡಿದೆ.

ಮೋಷನ್ ಪೋಸ್ಟರ್‌ನಲ್ಲಿ, ಅತ್ಯಂತ ಪ್ರತಿಭಾವಂತ ಅರವಿಂದ್ ಅಯ್ಯರ್ ಅವರು ಬಾಣಸಿಗರ ಟೋಪಿ ಧರಿಸಿರುವುದನ್ನು ಕಾಣಬಹುದು ಮತ್ತು ಕಥೆಯಲ್ಲಿ ಅತ್ಯಂತ ಪ್ರೀತಿಸುವ ಗಂಡನ ಪಾತ್ರವನ್ನು ನಿರ್ವಹಿಸುತ್ತಿದ್ದು ಪ್ರೇಕ್ಷಕರಿಗೆ ಆಪ್ಯಾಯಕರವಾದ ಸಂತೋಷವನ್ನು ನೀಡುತ್ತದೆ. ನಾಲ್ಕು ವರ್ಷಗಳ ನಂತರ ಈ ನಟ ಮತ್ತೆ ತೆರೆಗೆ ಬರುವುದನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ, ಹಿಂದೆಂದೂ
ನೋಡಿರದ ಅವತಾರದಲ್ಲಿ ಅವರನ್ನು ನೋಡುವುದು ಗಮನ ಸೆಳೆಯಲಿದೆ. ಕಾರ್ತಿಕ್ ಸರಗೂರ್ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಿಸಿದ್ದಾರೆ ಮತ್ತು ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಬ್ಬದ ಸಾಲಿನ ಬಿಡುಗಡೆಯ ಅಂಗವಾಗಿ ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ಭಾರತ ಸೇರಿದಂತೆ 200 ದೇಶಗಳಲ್ಲಿ ಅಕ್ಟೋಬರ್ 29 ರಂದು ಏಕಕಾಲದಲ್ಲಿ ವೀಕ್ಷಿಸಬಹುದಾಗಿದೆ.

 

Leave a Reply

Your email address will not be published. Required fields are marked *