ಸಿಕ್ಕಿದ್ದೇ ಚಾನ್ಸ್..! ಬಿಗ್ ಬಾಸ್ ಮನೇಲಿ ಮುತ್ತಿನ ಸುರಿಮಳೆ..!
ಬಿಗ್ ಬಾಸ್ ಮನೆಯಲ್ಲಿ ಅವಕಾಶ ಸಿಕ್ಕಿದರೆ ಸಾಕು ಅದನ್ನು ಕೆಲವರು ಬಳಕೆ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಟಾಸ್ಕ್ ವೇಳೆ ಮನೆಯ ಸದಸ್ಯರು ರಿಯಾಕ್ಟ್ ಮಾಡೋದಿಲ್ಲ ಅಂತ ಗೊತ್ತಾಗಿದ್ದೇ ತಡ ಕಿಶನ್, ಮನೆಯ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೇ ಕೊಟ್ಟಿದ್ದು. ಈ ವಿಚಾರದಲ್ಲಿ ಶೈನ್ ಶೆಟ್ರು ಸಹ ಕಿಶನ್ ರನ್ನೇ ಫಾಲೋ ಮಾಡಿದ್ರು.
ಬಿಗ್ಬಾಸ್ ಮನೆಯ 12 ನೇ ವಾರದ ಲಗ್ಜುರಿ ಬಜೆಟ್ ಟಾಸ್ಕ್ “ನನ್ನ ನೀನು ಗೆಲ್ಲಲಾರೆ”. ಇದರಲ್ಲಿ 82 ನೇ ದಿನ ಮನೆಯ ಸದಸ್ಯರಿಗೆ ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲು ವಿಶೇಷ ಸವಾಲು ನೀಡಲಾಯ್ತು. ಸೈರನ್ ಆದಾಗ ಮೊದಲು ಬಝರ್ ಒತ್ತಿದ ಸದಸ್ಯರಿಗೆ ವಿಶೇಷ ಅದೃಶ್ಯದ ಕನ್ನಡಕ ನೀಡಲಾಗುತ್ತೆ. ಅದನ್ನ ಧರಿಸಿದವರ ಯಾವುದೇ ಕ್ರಿಯೆಗೆ ಉಳಿದವರು ಪ್ರತಿಕ್ರಿಯಿಸುವಂತಿಲ್ಲ. ಒಂದು ವೇಳೆ ಯಾರಾದ್ರೂ ರಿಯಾಕ್ಟ್ ಮಾಡಿದ್ರೆ ಕನ್ನಡಕ ಧರಿಸಿದವರಿಗೆ 100 ಪಾಯಿಂಟ್ಸ್ ಸಿಗಲಿತ್ತು. ಮೊದಲು ಜಝರ್ ಒತ್ತಿದ ಕಿಶನ್ ಕನ್ನಡಕ ಹಾಕಿಕೊಂಡು ದೀಪಿಕಾ, ಭೂಮಿ, ಶೈನ್ ಬಳಿ ಹೋಗಿ ಮಾತನಾಡಿದರೂ ಯಾರೂ ರಿಯಾಕ್ಟ್ ಮಾಡಲಿಲ್ಲ. ಮುತ್ತು ಕೊಡಲೇ ಅಂತ ದೀಪಿಕಾ ಬಳಿಗೆ ಹೋಗಿ ಪ್ರಯತ್ನ ಮಾಡಿದಾಗ ಅವರು ರಿಯಾಕ್ಷನ್ ಕೊಟ್ಟು ಪೌಲ್ ಆದ್ರು. ನಂತರ ಹರೀಶ್ ರಾಜ್ ರ ಶರ್ಟ್ ಬಟನ್ ಬಿಚ್ಚಿದರೂ ಅವರು ಯಾವುದೇ ರಿಯಾಕ್ಷನ್ ಕೊಡಲಿಲ್ಲ. ಚಂದನಾರನ್ನ ಹಿಂದಿನಿಂದ ತಬ್ಬಿಕೊಂಡ ಕಿಶನ್, ಚಂದನಾಗೆ ಮುತ್ತು ಕೊಟ್ಟರು. ಚಂದನಾ ರಿಯಾಕ್ಟ್ ಮಾಡಿ ಪೌಲ್ ಆದ್ರು. ನಂತರ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಕಿಶನ್, ದೀಪಿಕಾಗೂ ಮುತ್ತು ಕೊಟ್ಟರು. ಪ್ರಿಯಾಂಕಾಗೂ 6 ಸಲ ಮುತ್ತು ಕೊಟ್ರು.
ಚಟುವಟಿಕೆ ಮುಗಿದ್ಮೇಲೆ ಕಿಶನ್ ರನ್ನ ಕೆಳಗೆ ಬೀಳಿಸಿ, ನಾನೇ ಸಿಕ್ಕಿದ್ದಾ ಬೇರ್ಯಾರೂ ಸಿಗಲಿಲ್ವ ಅಂತ್ಹೇಳಿ ನಾಲ್ಕು ಬಾರಿಸಿದರು ದೀಪಿಕಾ. ಆರು ಮುತ್ತು ಕೊಡ್ತೀಯಾ ಅಂತ ಕಿಶನ್ಗೆ ಕಂಡಕಂಡಲ್ಲಿ ಬಾರಿಸಿದ ಪ್ರಿಯಾಂಕ, ನಂತರ ಕಿಶನ್ರನ್ನ ಎಳೆದುಕೊಂಡು ಹೋಗಿ ಸ್ವಿಮ್ಮಿಂಗ್ ಫೂಲ್ ಗೆ ತಳ್ಳಿದರು.
ಇದಾದ ಬಹಳ ಹೊತ್ತಿನ ನಂತರ ಶೈನ್ ಶೆಟ್ಟಿಗೆ ಕನ್ನಡಕ ಧರಿಸೋ ಅವಕಾಶ ಸಿಕ್ತು. ಹುಡುಗಿಯ ವೇಷ ಧರಿಸಿದ ಶೈನ್ ಶೆಟ್ರು ಕಿಶನ್ರನ್ನ ಅನುಕರಿಸಿ, ಮನೆಯ ಸದಸ್ಯರಿಗೆ ಮುತ್ತು ಕೊಡೋಕ್ಕೆ ಶುರುಮಾಡಿದ್ರು. ಮೊದಲಿಗೆ ಚಂದನಾ, ನಂತರ ಭೂಮಿ ಪೌಲ್ ಆದ್ರು. ಶೈನ್ ಮುತ್ತು ಕೊಟ್ಟಿದ್ದಕ್ಕೆ ದೀಪಿಕಾ ಬೇಸರಗೊಂಡಂತೆ ಅವರ ರಿಯಾಕ್ಷನ್ ಇತ್ತು.
ಇನ್ನು ವಾಸುಕಿ ವೈಭವ್ ಗೆ ಕನ್ನಡಕ ಧರಿಸೋ ಅವಕಾಶ ಬಂದಾಗ ವಾಸುಕಿ ಮತ್ತು ಚಂದನ್ ಆಚಾರ್ ನಡುವೆ ಪ್ರೈವೇಟ್ ಪಾರ್ಟ್ ಬಗ್ಗೆ ಜೋರು ಜೋರು ಚರ್ಚೆಯೇ ನಡೆದುಹೋಯಿತು. ವಾಸುಕಿ ಚಂದನ್ ಬಳಿಗೆ ಹೋಗಿ ನಿಂತಾಗ ಚಂದನ್ ರಿಯಾಕ್ಟ್ ಮಾಡಿ ಪೌಲ್ ಆದ್ರು. ಚಟುವಟಿಕೆ ಮುಗಿದ ಮೇಲೆ ಚಂದನ್ ಮಾತನಾಡಿ, ಅವನ ಪ್ರೈವೇಟ್ ಪಾರ್ಟ್ ಟಚ್ ಆಯಿತು. ಅದಕ್ಕೇ ತಾನು ರಿಯಾಕ್ಟ್ ಮಾಡಿದ್ದು ಎಂದರು. ಇದನ್ನ ಕೇಳಿ ಬೇಸರಗೊಂಡ ವಾಸುಕಿ, ನನಗೇನು ಚಟಾನಾ, ಬಾಯಿಗೆ ಬಂದ ಹಾಗೆ ಮಾತನಾಡಬಾರದು ಎಂದು ವಾರ್ನ್ ಮಾಡಿದರು. ಆಗ ಚಂದನ್ ಮಾತಾಡಿ, ನನ್ನ ನಗಿಸಿ, ಹಾಸ್ಯ ಮಾಡಿ ರಿಯಾಕ್ಟ್ ಮಾಡಿಸಿದ್ರೆ ಓಕೆ, ಆದರೆ, ನಿನ್ನ ಪ್ರೈವೇಟ್ ಪಾರ್ಟ್ ಟಚ್ ಆಗಿದ್ದರಿಂದ ನಾನು ರಿಯಾಕ್ಟ್ ಹಾಗೆ ಮಾಡಬೇಕಾಯ್ತು ಎಂದು ಮತ್ತೆ ಅದನ್ನೇ ಹೇಳಿದರು. ಇನ್ನು ಮನಸಾಕ್ಷಿಯ ಬಗ್ಗೆ ಇಬ್ಬರೂ ಮಾತಾಡಿದ್ರು.
ಅದೃಶ್ಯದ ಕನ್ನಡ ದೊಡ್ಮನೆಯಲ್ಲಿ ಮುತ್ತಿನ ಸುರಿಮಳೆಯ ಜೊತೆಗೆ ಮಾತಿನ ಯುದ್ಧಕ್ಕೂ ಕಾರಣವಾಯಿತು.