ನಾನು ಮತ್ತು ಗುಂಡ ಪಾಸ್, ಜಾಕ್ ಮಂಜು ನೋಡಿ ಮೆಚ್ಚಿ ವಿತರಣೆಗೆ ಸೈ !!!
ಮಾತುಬಾರದ ಮೂಕು ಪ್ರಾಣಿಗಳಿಗೆ ಸ್ವಲ್ಪ ಪ್ರೀತಿ ತೋರಿದರೆ ಅದು ಇಡೀ ಜೀವನ ಅದನ್ನ ನೆನಪು ಮಾಡಿಕೊಳ್ಳುತ್ತವೆ. ಅದರಲ್ಲೂ ಶ್ವಾನಗಳು ಇದರಲ್ಲಿ ಎತ್ತಿದ ಕೈ. ಚಂದನವನದಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಬಹಳಷ್ಟು ಬಾರಿ ಅನಾವರಣಗೊಂಡಿದೆ. ಅದರಲ್ಲಿ ಮತ್ತೊಂದು ಸೇರ್ಪಡೆ ನಾನು ಮತ್ತು ಗುಂಡ ಚಿತ್ರ, ಇದು ಈಗ ತೆರೆಗೆ ಬರಲು ಸಿದ್ಧವಾಗಿದೆ.
ಇಡೀ ಸಿನಿಮಾ, ಫಸ್ಟ್ ಲುಕ್, ಟೀಸರ್ ಗಳಿಂದ ವಿಶೇಷವಾಗಿ ಸದ್ದು ಮಾಡುತ್ತಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು ಹಾಗು ಸಿಂಬಾ ಅನ್ನುವ ಶ್ವಾನ ಅಭಿಯನದ ಚಿತ್ರ ಮಕ್ಕಳಿಂದ ಹಿಡಿದು ಇಳಿವಯಸ್ಕರಿಗೆಲ್ಲರಿಗು ಇಷ್ಟವಾಗುವ ಸೆನಿಮಾ. ಫನ್ ಎಲಿಮೆಂಟ್ ಗೆ ಸೆಂಡಿಮೆಂಟ್ ಸೇರಿದರೆ ಹೇಗೋ ಹಾಗೆ
ಹಾಗಾಗಿಯೇ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಪೊಯಂ ಪಿಕ್ಚರ್ಸ್ ಬ್ಯಾನರ್ಸ್ ನಡಿ ರಘು ಹಾಸನ್ ಅವರು ನಿರ್ಮಿಸಿರುವ ಚಿತ್ರಕ್ಕೆ ಸೆನ್ಸಾರ್ ಮಂಡಲಿ ಹಸಿರು ಬಾವುಟ ತೋರಿಸಿದೆ. ನಾನು ಮತ್ತು ಗುಂಡ ಯು/ಏ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದರೆ, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.
ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ನಾನು ಮತ್ತು ಗುಂಡ ಚಿತ್ರವನ್ನು ನೋಡಿ ಮೆಚ್ಚಿಕೊಂಡಿರುವ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಸರ್ಟೀಫಿಕೆಟ್ ನೀಡಿದೆ.
ಶ್ವಾನವನ್ನೇ ಮುಖ್ಯ ಪಾತ್ರದಾರಿಯನ್ನಾಗಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ವಿಶೇಷ ಅಲೆಯನ್ನೆಬ್ಬಿಸುವ ತವಕದಲ್ಲಿರುವ ಚಿತ್ರತಂಡಕ್ಕು ಈ ಸುದ್ದಿ ಸಂತಸ ತಂದಿದೆ.
ಮನುಷ್ಯ ಹಾಗು ಪ್ರಾಣಿಗಳ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಅದ್ಬುತ ಚಿತ್ರವೆಂದು ಸೆನ್ಸಾರ್ ಮಂಡಳಿ ಚಿತ್ರವನ್ನು ಬಣ್ಣಿಸಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಮತ್ತೊಂದಡೆ ಚಿತ್ರಗಳನ್ನು ವಿತರಿಸಿ ಯಶಸ್ಸು ಕಂಡಿರುವ ಮೈಸೂರು ಟಾಕೀಸ್ ನ ಜಾಕ್ ಮಂಜು ಅವರು ನಾನು ಮತ್ತು ಗುಂಡ ಚಿತ್ರವನ್ನು ನೋಡಿ ಮೆಚ್ಚಿ ವಿತರಣೆಗೆ ಮುಂದಾಗಿದ್ದಾರೆ.
ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶಿಷ್ಠ ಬಗೆ ಸಿನಿಮಾಗಳನ್ನ ವಿತರಿಸಿ, ಯಶಸ್ಸು ಕಂಡಿರುವ ಜಾಕ್ ಮಂಜು, ಈ ವರ್ಷದ ಆರಂಭದಲ್ಲೇ ನಾನು ಮತ್ತು ಗುಂಡ ಚಿತ್ರವನ್ನು ವಿತರಣೆಗೆ ತೆಗೆದುಕೊಂಡು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಕುರಿತಂತೆ ಮತ್ತಷ್ಟು ವಿಶೇಷ ವಿಚಾರಗಳನ್ನು ಹಿಂಚಿಕೊಳ್ಳುವ ಧಾವಂತದಲ್ಲಿದೆ. ಇದೀಗ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಪ್ರಕಟಿಸುವ ಸನ್ನಾಹದಲ್ಲಿದೆ.