ಟ್ಯಾಕ್ಸ್ ಉಳಿಸೋಕೆ ಇಲ್ಲಿದೆ ಸಖತ್ ಐಡಿಯಾ
ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವೆಷ್ಟು? ಎನ್ನುವುದನ್ನು ಅರಿಯುವುದರೊಂದಿಗೆ ನ್ಯಾಯಯುತವಾಗಿ ತೆರಿಗೆ ಉಳಿಸುವ ಪ್ರಕ್ರಿಯೆ ಆರಂಭಿಸಬಹುದು. ಇದಕ್ಕೆ ಮೊದಲು ನೀವು ಆದಾಯ ತೆರಿಗೆಯ ಮಿತಿಯನ್ನು ಅರಿಯಬೇಕು. ತೆರಿಗೆ ಮಿತಿಗೆ ಅನುಗಣವಾಗಿ ನೀವು ತೆರಿಗೆ ಉಳಿತಾಯಕ್ಕೆ ಯೋಜನೆ ರೂಪಿಸಬಹುದು.
ಆದಾಯ ತೆರಿಗೆ ಮಿತಿಗಳು 2019-20 | |||||
ಸಾಮಾನ್ಯ ನಾಗರಿಕರಿಗೆ (60 ವರ್ಷ ಒಳಪಟ್ಟು) | ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ರ ಒಳಪಟ್ಟು) | ಅತ್ಯಂತ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟು) | |||
ತೆರಿಗೆ ಸ್ಲ್ಯಾಬ್ ಗಳು | ತೆರಿಗೆ ಪ್ರಮಾಣ | ತೆರಿಗೆ ಸ್ಲ್ಯಾಬ್ ಗಳು | ತೆರಿಗೆ ಪ್ರಮಾಣ | ತೆರಿಗೆ ಸ್ಲ್ಯಾಬ್ ಗಳು | ತೆರಿಗೆ ಪ್ರಮಾಣ |
2.5 ಲಕ್ಷದ ವರೆಗಿನ ಆದಾಯ | ತೆರಿಗೆ ಇಲ್ಲ | 3 ಲಕ್ಷದ ವರೆಗಿನ ಆದಾಯ | ತೆರಿಗೆ ಇಲ್ಲ | 5 ಲಕ್ಷದ ವರೆಗಿನ ಆದಾಯ | ತೆರಿಗೆ ಇಲ್ಲ |
2.5 ಲಕ್ಷದಿಂದ 5 ಲಕ್ಷ | ಶೇ 5 | 3 ಲಕ್ಷದಿಂದ 5 ಲಕ್ಷ | ಶೇ 5 | 5 ಲಕ್ಷದ ವರೆಗಿನ ಆದಾಯ | ತೆರಿಗೆ ಇಲ್ಲ |
5 ಲಕ್ಷದಿಂದ 10 ಲಕ್ಷ | ಶೇ 20 | 5 ಲಕ್ಷದಿಂದ 10 ಲಕ್ಷ | ಶೇ 20 | 5 ಲಕ್ಷದಿಂದ 10 ಲಕ್ಷ | ಶೇ 20 |
10 ಲಕ್ಷ ಮೇಲ್ಪಟ್ಟು | ಶೇ 30 | 10 ಲಕ್ಷ ಮೇಲ್ಪಟ್ಟು | ಶೇ 30 | 10 ಲಕ್ಷ ಮೇಲ್ಪಟ್ಟು | ಶೇ 30 |
ರೂ. 5 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ : 5 ಲಕ್ಷದ ವರಗಿನ ಆದಾಯವಿರುವವರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87(ಎ) ಅಡಿಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಆದರೆ ನಿಮ್ಮ ಆದಾಯ ರೂ. 5 ಲಕ್ಷದ ಒಳಿಗಿದೆ ಎಂದು ತೋರಿಸಲು ಐಟಿ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. |
ಉದಾಹರಣೆ- 1
ಕೇಂದ್ರ ಸರ್ಕಾರ ಆದಾಯ ತೆರಿಗೆ ವಿನಾಯ್ತಿಯನ್ನು ರೂ 5 ಲಕ್ಷಕ್ಕೆ ಹೆಚ್ಚಳ ಮಾಡಿರುವುದು ಮಧ್ಯಮ ವರ್ಗದ ಸಾಕಷ್ಟು ಕುಟುಂಬಗಳಿಗೆ ಅನುಕೂಲವಾಗಲಿದೆ. ಆದಾಯ ತೆರಿಗೆ ಕಾಯ್ದೆಯಡಿ ಇರುವ ಕೆಲವು ವಿನಾಯ್ತಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ವಾರ್ಷಿಕ 8 ಲಕ್ಷ ರೂ. ಆದಾಯ ಹೊಂದಿರುವ ವೇತನದಾರರು ಕೂಡ ಯಾವುದೇ ತೆರಿಗೆ ಕಟ್ಟದೇ ನಿರುಮ್ಮಳವಾಗಿರಬಹುದು .( ಪಟ್ಟಿ ಗಮನಿಸಿ)
ರೂ. 8 ಲಕ್ಷ ಆದಾಯವಿದ್ದರೂ ಶೂನ್ಯ ತೆರಿಗೆ ಪಾವತಿ ಹೇಗೆ? | |
ವೇತನ ಆದಾಯ | ರೂ. 8 ಲಕ್ಷ |
ಇತರೆ ಆದಾಯ ( ಎಫ್ ಡಿ , ಬಾಂಡ್ ಇತರೆ ಮೂಲಗಳ ಆದಾಯ) | ರೂ. 10 ಸಾವಿರ |
ಸ್ಟ್ಯಾಂಡರ್ಡ್ ಡಿಡಕ್ಷನ್ | ರೂ. – 50 ಸಾವಿರ |
ಬಾಡಿಗೆ ಭತ್ಯೆ/ ಗೃಹ ಸಾಲ( ಬಹುತೇಕರು ಬಾಡಿಗೆ ಭತ್ಯೆ ಪಡೆಯುತ್ತಾರೆ ಇಲ್ಲ ಗೃಹ ಸಾಲ ಪೆಡಿದಿರುತ್ತಾರೆ) | ರೂ. – 1 ಲಕ್ಷ |
ಸೆಕ್ಷನ್ 80 ಸಿ | ರೂ. – 1.5 ಲಕ್ಷ |
ಆರೋಗ್ಯ ವಿಮೆ ( ಹೆಲ್ತ್ ಇನ್ಶೂರೆನ್ಸ್ ) | ರೂ. -10 ಸಾವಿರ |
ತೆರಿಗೆಗೆ ಒಳಪಡುವ ನಿವ್ವಳ ಆದಾಯ ( ಸೆಕ್ಷನ್ 87ಎ ಪ್ರಕಾರ ರೂ. 5 ಲಕ್ಷ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ) | ರೂ. 5 ಲಕ್ಷ |
ಸೂಚನೆ: ಇದೊಂದು ಸಾಂದರ್ಭಿಕ ವಿವರಣೆ.
ಉದಾಹರಣೆ-2
30 ವರ್ಷ ವಯಸ್ಸಿನ ಮಂಜುನಾಥ್ ವಾರ್ಷಿಕವಾಗಿ ರೂ. 10 ಲಕ್ಷ ಆದಾಯ ಗಳಿಸುತ್ತಾರೆ. ಅವರು ರೂ. 50 ಲಕ್ಷ ಮೊತ್ತದ ಗೃಹ ಸಾಲವನ್ನು ಪಾವತಿಸುತ್ತಿದ್ದಾರೆ. ಅವರು ಎಷ್ಟು ತೆರಿಗೆ ಪಾವತಿಸಬೇಕು? ಗರಿಷ್ಠ ತೆರಿಗೆ ಉಳಿಸಲು ಏನು ಮಾಡಬಹುದು ಎನ್ನುವದರ ಸಾಂದರ್ಭಿಕ ವಿವರಣೆ ನೋಡೋಣ.
ಮಂಜುನಾಥ್ ಇಎಲ್ ಎಸ್ ಎಸ್ ,ಪಿಪಿಎಫ್ ಮತ್ತು ಇನ್ಶೂರೆನ್ಸ್ ಸೇರಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷ ಉಳಿತಾಯ ಮಾಡುತ್ತಾರೆ. ಮಂಜುನಾಥ್ ತಮಗೆ, ಮಡದಿ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಾಗಿರುವ ಪೋಷಕರಿಗೆ ಆರೋಗ್ಯ ವಿಮೆ ಪಡೆದುಕೊಂಡಿದ್ದಾರೆ. ಆರೋಗ್ಯ ವಿಮೆಗೆ ವಾರ್ಷಿಕ 50 ಸಾವಿರ ಪ್ರೀಮಿಯಂ ಪಾವತಿಸುತ್ತಾರೆ. ಇದಕ್ಕಾಗಿ ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ ಪಡೆದುಕೊಳ್ಳುತ್ತಾರೆ. ಮಂಜುನಾಥ್ ತಾವು ಮಾಡಿರುವ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿಯ ಮೇಲೆ ಸೆಕ್ಷನ್ 24 ಅಡಿಯಲ್ಲಿ ರೂ. 2 ಲಕ್ಷದ ವರೆಗೆ ವಿನಾಯಿತಿ ಪಡೆಯುತ್ತಾರೆ.. ಇನ್ನು ಎನ್ ಪಿಎಸ್ ನಲ್ಲಿ ರೂ. 50 ಸಾವಿರ ಹೂಡಿಕೆ ಮಾಡಿರುವುದರಿಂದ ಅವರಿಗೆ ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ರೂ. 50 ಸಾವಿರ ವಿನಾಯಿತಿ ಸಿಗುತ್ತಿದೆ.
10 ಲಕ್ಷ ಇನ್ ಕಮ್ ಇದ್ರೂ ಶೂನ್ಯ ತೆರಿಗೆ ಪಾವತಿ ಹೇಗೆ ? | |
ಅವರ ಒಟ್ಟು ಆದಾಯ | ₹ 10 ಲಕ್ಷ |
ಸ್ಟ್ಯಾಂಡರ್ಡ್ ಡಿಡಕ್ಷನ್ ವಿನಾಯಿತಿ | ₹50ಸಾವಿರ |
ಸ್ಟ್ಯಾಂಡರ್ಡ್ ಡಿಡಕ್ಷನ್ ನಂತರದ ಆದಾಯ | ₹ 9.5 ಲಕ್ಷ |
ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ | ₹ 1.5 ಲಕ್ಷ |
ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ | ₹50ಸಾವಿರ |
ಸೆಕ್ಷನ್ 24 ರ ಅಡಿಯಲ್ಲಿ ವಿನಾಯಿತಿ | ₹ 2 ಲಕ್ಷ |
ಸೆಕ್ಷನ್ 80 ಸಿಸಿಡಿ(1ಬಿ) ಅಡಿಯಲ್ಲಿ ವಿನಾಯಿತಿ | ₹50ಸಾವಿರ |
ವಿನಾಯಿತಿಗಳ ಬಳಿಕ ತೆರಿಗೆಗೆ ಒಳಪಡುವ ಆದಾಯ | ₹ 5 ಲಕ್ಷ |
ಒಟ್ಟು ತೆರಿಗೆ | ₹ 12,500 |
ಸೆಕ್ಷನ್ 87 ಎ ಅಡಿಯಲ್ಲಿ ಸಿಗುವ ವಿನಾಯಿತಿ | ₹ 12,500 |
ಪಾವತಿಸಬೇಕಿರುವ ನಿವ್ವಳ ತೆರಿಗೆ | ₹ 0 |
₹ 10 ಲಕ್ಷ ಆದಾಯವಿದ್ದರೂ ಸಹಿತ ಆದಾಯ ತೆರಿಗೆ ವಿನಾಯಿತಿ ಮತ್ತು ಇನ್ನಿತರ ರಿಯಾಯಿತಿಗಳನ್ನು ಬಳಸಿಕೊಂಡು ಮಂಜುನಾಥ್ ಶೂನ್ಯ ತೆರಿಗೆ ಪಾವತಿಸಿದರು. |
ಸೂಚನೆ: ಇದೊಂದು ಸಾಂದರ್ಭಿಕ ವಿವರಣೆ.