ಬಿಗ್ ‌ಬಾಸ್‌ ಮನೇಲಿ ಲೈಟ್ಸ್‌ ಆಫ್‌- ಸ್ಪರ್ಧಿಗಳನ್ನ ಹೊರಹಾಕಿದ ಬಿಗ್ ‌ಬಾಸ್‌

ಬಿಗ್ ‌ಬಾಸ್‌ ಮನೇಲಿ ಲೈಟ್ಸ್‌ ಆಫ್‌- ಸ್ಪರ್ಧಿಗಳನ್ನ ಹೊರಹಾಕಿದ ಬಿಗ್ ‌ಬಾಸ್‌

ಯಾವತ್ತೂ ಲೈಟ್ಸ್‌ ಆಫ್‌ ಆದ ಉದಾಹರಣೆಯೇ ಇಲ್ಲ. ಆದ್ರೆ ಈ ಸಲ ಮಟಮಟ ಮಧ್ಯಾಹ್ನವೇ ಲೈಟ್ಸ್‌ ಆಫ್‌ ಆಗಿ ಹೋಯ್ತು. ಇದ್ರ ಜೊತೆಗೆ ಮನೇಲಿರೋ ಸ್ಪರ್ಧಿಗಳನ್ನ ಮನೆಯಿಂದ ಹೊರಹಾಕಿದ ಪ್ರಸಂಗವೂ ನಡೆದುಹೋಯ್ತು. ಬಿಗ್ ‌ಬಾಸ್‌ ಮನೆಯಿಂದ ಸ್ಪರ್ಧಿಗಳನ್ನ ಹೊರಹಾಕಿದ್ಮೇಲೆ ಏನಾಯ್ತು ಅನ್ನೋದನ್ನ ಡೀಟೇಲ್‌ ಆಗಿ ನೋಡೋಣ..
ದಿನ 53… ಸಮಯ ಮಧ್ಯಾಹ್ನ 3:20 ಮನೆಯ ಸ್ಪರ್ಧಿಗಳೆಲ್ಲಾ ಆಗಷ್ಟೇ ಊಟ ಮುಗಿಸಿ ಕೆಲವ್ರು ಆರಾಮಾಗಿ ಕುಳಿತಿದ್ರೆ, ಇನ್ನು ಕೆಲವರು ತಮ್ಮತಮ್ಮ ಕೆಲಸ ಮಾಡ್ತಾ ಇದ್ರು… ಆಗ ಬಿಗ್‌ ಬಾಸ್‌ ಕಡೆಯಿಂದ ಬ್ಯಾಕ್‌ ಟು ಬ್ಯಾಕ್‌ ಘೋಷಣೆಗಳು ಬಂದ್ವು. ಮೊದಲು ಊಟ ತುಂಬಾ ಚೆನ್ನಾಗಿತ್ತಾ ಅಂದಾಗ ಮನೆಯ ಸದಸ್ಯರೆಲ್ಲಾ ಹೌದು ಎಂದ್ರು. ಊಟ ಜಾಸ್ತಿ ಆಯ್ತಾ, ಸದಸ್ಯರಿಗೆ ನಿದ್ದೆ ಬರ್ತಾ ಇದ್ಯಾ, ಮಲಗಿ ನಿದ್ದೆ ಮಾಡಬೇಕು ಅನಿಸ್ತಿದ್ಯಾ, ಮನೆಯ ಸದಸ್ಯರು ಬೆಡ್‌ ರೂಂ ಏರಿಯಾಕ್ಕೆ ಹೋಗಲು ಇಚ್ಚಿಸುತ್ತೀರಾ ಎಂದಾಗ್ಲೂ ಮನೆಯ ಸದಸ್ಯರು ಹೌದು ಅಂತಲೇ ಹೇಳಿದ್ರು. ಈ ಕೂಡಲೇ ಮನೆಯ ಸದಸ್ಯರು ಬೆಡ್ ‌ರೂಂ ಏರಿಯಾಕ್ಕೆ ಬನ್ನಿ ಅಂದ್ಮೇಲೆ ಎಲ್ಲರೂ ಬೆಡ್‌ ರೂಂಗೆ ಹೋದ್ರು. ಆಗ ನಿದ್ದೆ ಮಾಡಲು ಸಿದ್ದರಿದ್ದೀರಾ. ಮನೆಯ ಲೈಟ್ಸ್‌ ಆಫ್‌ ಮಾಡಬೇಕಾ ಅಂತ ಕೇಳಿದ್ರು ಬಿಗ್‌ ಬಾಸ್‌. ಹೌದು ಅಂತ ಮನೆಯ ಸದಸ್ಯರು ಹೇಳುತ್ತಿದ್ದಂತೆ ಮನೆಯ ಲೈಟ್ಸ್‌ ಆಫ್‌ ಆಗೇ ಹೋಯ್ತು.

ಆದ್ರೆ ಇದನ್ನ ಮನೆಯ ಸದಸ್ಯರೇ ನಂಬೋಕ್ಕೆ ಸಿದ್ದರಿರಲಿಲ್ಲ. ಒಬ್ಬರು, ಇವತ್ತು ರಾತ್ರಿಯೆಲ್ಲಾ ಜಾಗರಣೆ ಅಂದ್ರೆ, ಮತ್ತೊಬ್ರು ರಾತ್ರಿಯೆಲ್ಲಾ ಟಾಸ್ಕ್‌ ಅಂದ್ರು. ಲೈಟ್ಸ್‌ ಆಪ್‌ ಮಾಡಿದ್ರೆ ಮಲಗಬೇಕಾ ಎಂದ ಕುರಿ ಪ್ರತಾಪ್‌ರ ಕನ್‌ಫ್ಯೂಶನ್‌ ಬೇರೆ ಜೊತೆಯಾಯ್ತು. ಕೊನೆಗೆ ಭೂಮಿಶೆಟ್ಟಿ, ಬಿಗ್‌ ಬಾಸ್‌ ನೀವು ಇನ್ನೊಂದು‌ ಸಲ ಬ್ಲೂ ಲೈಟ್ಸ್‌ ಹಾಕಿದ್ರೆ ಎಲ್ಲ ಮಲಗಿಕೋತಿವಿ ಅಂದ್ರು. ಆಗ, ಬ್ಲೂ ಲೈಟ್ಸ್‌ ಆನ್‌ ಆಯ್ತು. ಥ್ಯಾಂಕ್ಸ್‌ ಹೇಳಿದ ಮನೆಯ ಸದಸ್ಯರು ನಿದ್ರೆಗೆ ಜಾರಿದ್ರು.

ಹಾಗೆ ಮಲಗಿದ್ರೋ ಇಲ್ವೋ. ಮತ್ತೆ ಬಿಗ್‌ ಬಾಸ್‌ ಧ್ವನಿ ಕೇಳಿಸ್ತು. ಸದಸ್ಯರಿಗೆ ನಿದ್ದೆ ಸಾಕು ಅನಿಸುತ್ತಿದೆಯಾ, ಈ ಕೂಡಲೇ ಏಳಬೇಕು ಅನಿಸ್ತಿದೆಯಾ ಅಂತ ಕೇಳಿದ್ರು. ಮನೆಯವರು ಬೇರೇನು ಹೇಳೋ ಹಾಗಿಲ್ಲ, ಹಾಗಾಗಿ ಹೌದು ಅಂತಷ್ಟೇ ಹೇಳಿದ್ರು. ಈ ಕೂಡಲೇ ಲೈಟ್ಸ್‌ ಆನ್‌ ಮಾಡುವುದಾ ಅಂದಾಗ್ಲೂ, ಹೌದು ಸ್ವಾಮಿ ಅಂತ ಉತ್ತರ ಬಂತು. ಇನ್ನೇನಿದೆ, ಲೈಟ್ಸ್‌ ಆನ್‌ ಆಯ್ತು. ಪಾಪ, ಫಸ್ಟ್‌ ಟೈಂ ಹಗಲು ಹೊತ್ತಿನಲ್ಲಿ ಮಲಗೋ ಆಸೇಲಿದ್ದ ಎಲ್ಲರೂ ಅನಿರ್ವಾಯವಾಗಿದ್ದು ಎದ್ದೇಳುವಂತಾಯ್ತು.

ಇದಾದ ಸ್ವಲ್ಪ ಹೊತ್ತಿಗೆ ಈ ವಾರದ ಲಗ್ಜುರಿ ಬಜೆಟ್‌ ಟಾಸ್ಕ್ ಅಶ್ವಮೇಧದ ನಾಲ್ಕನೇ ಹಂತ ಬಣ್ಣ ಗೆಲುವಿನ ಬಣ್ಣ ಶುರುವಾಯ್ತು. ಇದರಲ್ಲಿ ಚಂದನಾ ನೇತೃತ್ವದ ಭಜರಂಗಿ ತಂಡ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಜರಂಗಿಗೆ ಒಂದು ಬಾವುಟ ಸಿಕ್ತು. ಒಟ್ಟಾರೆ ನಾಲ್ಕು ಹಂತಗಳಲ್ಲಿ ತಲಾ ಎರಡೆರಡು ಬಾವುಟ ಸಂಪಾದಿಸಿದ್ರು ಭಜರಂಗಿ ಮತ್ತು ಮಿಠಾಯಿ ತಂಡಗಳು.

ಅಶ್ವಮೇಧ ಟಾಸ್ಕ್‌ ನಲ್ಲಿ ಯಾರು ಗೆಲ್ತಾರೋ ಆ ತಂಡಕ್ಕೆ ಮನೆಯಲ್ಲೇ ಉಳಿಯಲು ಇಮ್ಯೂನಿಟಿ ಮತ್ತು ಸೋತ ತಂಡದ ಸದಸ್ಯರು ನಾಮಿನೇಟ್‌ ಆಗಬೇಕಿತ್ತು. ಆದ್ರೆ ಟಾಸ್ಕ್‌ ನಲ್ಲಿ ಯಾರು ಗೆಲ್ಲದ ಕಾರಣ ಕ್ಯಾಪ್ಟನ್‌ ರಾಜು ತಾಳಿಕೋಟೆ ಹೊರತುಪಡಿಸಿ ಎರಡೂ ತಂಡಗಳ ಎಲ್ಲಾ ಸದಸ್ಯರನ್ನು ನಾಮಿನೇಟ್‌ ಮಾಡಲಾಯ್ತು.

ಇದಾದ್ಮೇಲೆ ಬಂದದ್ದೇ ಬಿಗ್‌ ಶಾಕಿಂಗ್‌ ನ್ಯೂಸ್‌. ಮನೆಯ ಸದಸ್ಯರು ನಿಯಮಗಳನ್ನ ಉಲ್ಲಂಘನೆ ಮಾಡಿದ್ದಕ್ಕೆ ಎಲ್ಲರನ್ನೂ ಮನೆಯಿಂದ ಹೊರಹಾಕಿದ್ರು ಬಿಗ್‌ ಬಾಸ್‌. ಕ್ಯಾಪ್ಟನ್‌ ರಾಜು ತಾಳಿಕೋಟೆ ಬಿಟ್ಟು ಉಳಿದವರ್ಯಾರು ರಾತ್ರಿ ಮನೇಲಿ ಮಲಗುವಂತಿಲ್ಲ. ಗಾರ್ಡನ್‌ ಏರಿಯಾ ಮತ್ತು ಆಕ್ಟಿವಿಟಿ ಏರಿಯಾದಲ್ಲೇ ಮಲಗಬೇಕು ಅಂತ ಬಿಗ್ ‌ಬಾಸ್‌ ಆದೇಶ ಹೊರಡಿಸಿದ್ರು.

ಈ ನಡುವೆ ಫಿಸಿಕಲ್‌ ಟಾಸ್ಕ್‌ ಗಳಲ್ಲಿ ಸತತ ಸೋಲುಗಳ ನಂತರ ಕೊನೆಗೂ ಟಾಸ್ಕ್‌ ಸೋಲಲಿಲ್ಲ ಅನ್ನೋದು ಶೈನ್‌ ಮತ್ತು ದೀಪಿಕಾಗೆ ತೃಪ್ತಿ ತಂದಿದೆ. ಆದ್ರೆ ಅವರದ್ದೇ ತಂಡದ ನಾಯಕಿ ಚಂದನಾಗೆ ಮಾತ್ರ ಶೈನ್‌, ದೀಪಿಕಾ ಟಾಸ್ಕ್‌ ವೇಳೆ ನಡೆದುಕೊಂಡ ರೀತಿ ಬೇಸರ ತರಿಸಿದೆ. ಇದೇ ವಿಚಾರಾನ ಅವರು ವಾಸುಕಿ ಬಳಿ ಹೇಳ್ಕೊಂಡು ಕಣ್ಣೀರು ಹಾಕಿದ್ರು. ನನ್ನನ್ನ ಅವರಿಬ್ಬರು ಲೆಕ್ಕಕ್ಕೇ ತಗೊಳ್ಳಲಿಲ್ಲ ಅಂತ ಚಂದನಾ ಭಾವುಕರಾದ್ರು.
ಇತ್ತ ಶೈನ್‌, ದೀಪಿಕಾ ಜೊತೆ ಮಾತಾಡ್ತಾ, ಚಂದನಾ ಟಾಸ್ಕ್‌ ಮುಗಿದ ಮೇಲೆ ಕಂಗ್ರಾಟ್ಸ್‌ ಹೇಳೋಕ್ಕೂ ಸಿಗಲೇ ಇಲ್ಲ ಅಂದ್ರು.

ಈ ವಾರ ಬಿಗ್‌ ಬಾಸ್‌, ಮನೆಯ ಸದಸ್ಯರಿಗೆ ಶಾಕ್‌ ಮೇಲೆ ಶಾಕ್‌ ಕೊಟ್ಟಿದ್ದಾರೆ. ಹಾಡಹಗಲೇ ಲೈಟ್ಸ್‌ ಆಫ್‌ ಮಾಡಿದ್ದು, ಮನೆಯ ಸದಸ್ಯರಿಗೆ ಶಿಕ್ಷೆ ವಿಧಿಸಿದ್ದು ಒಂದ್ಕಡೆ ಆದ್ರೆ, ಮತ್ತೊಂದು ಪ್ರಮುಖ ವಿಚಾರ ಕ್ಯಾಪ್ಟನ್‌ ರಾಜು ತಾಳಿಕೋಟೆ ಬಿಟ್ಟು ಉಳಿದೆಲ್ಲಾ ಸದಸ್ಯರನ್ನ ನಾಮಿನೇಟ್‌ ಮಾಡಿದ್ದು. ಇಮ್ಯುನಿಟಿಗೆ ಅವಕಾಶ ಕೊಟ್ರೂ ಅದನ್ನ ಬಳಸಿಕೊಳ್ಳಲು ಎರಡೂ ತಂಡಗಳು ವಿಫಲವಾದ್ವು. ಪ್ರತಿವಾರ ಭಾನುವಾರವೇ ನಾಮಿನೇಶನ್‌ ಮುಗಿದು, ಸೋಮವಾರದಿಂದ ಶುಕ್ರವಾರದವರೆಗೆ ವೋಟಿಂಗ್‌ ಲೈನ್‌ ತೆರೆದಿರುತ್ತಿತ್ತು. ಆದ್ರೆ ಈ ಬಾರಿ ಕೇವಲ ಒಂದೇ ದಿನ ವೋಟಿಂಗ್‌ ಲೈನ್‌ ಆನ್‌ ಇರೋದು. 24 ಗಂಟೆಗಳಲ್ಲಿ ಯಾರ ಭವಿಷ್ಯ ಏನಾಗುತ್ತೆ ಅನ್ನೋದು ನಿರ್ಧಾರವಾಗಿಬಿಡುತ್ತೆ. ಕಡಿಮೆ ಟೈಂ ಇರೋದ್ರಿಂದ ಕೆಲ ಸ್ಪರ್ಧಿಗಳ ಅಭಿಮಾನಿಗಳು ವೋಟಿಂಗ್‌ ಮಾಡಲಿಕ್ಕಾಗದೆ ಹೋದ್ರೆ, ಅದರ ಪರಿಣಾಮ ಎಲಿಮಿನೇಶನ್‌ ವೇಳೆ ರಿಪ್ಲೆಕ್ಟ್‌ ಆಗೋ ಸಾಧ್ಯತೆಯಿದೆ.

 

Leave a Reply

Your email address will not be published. Required fields are marked *