ಬಿಗ್ ಬಾಸ್ ಮನೆಯಿಂದ 4ನೇ ವಾರ ಎಲಿಮಿನೇಟ್ ಆಗೋರು ಇವರೇ..!

ಬಿಗ್ ಬಾಸ್ ಮನೆಯಿಂದ 4ನೇ ವಾರ ಎಲಿಮಿನೇಟ್ ಆಗೋರು ಇವರೇ..!

ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರೋ ಕಂಟೆಸ್ಟೆಂಟ್ಗಳೆಂದ್ರೆ, ರಶ್ಮಿಯಿಂದ ನೇರನಾಮಿನೇಟ್ ಆಗಿರೋ ಪ್ರಿಯಾಂಕ, ಕ್ಯಾಪ್ಟನ್ ಹರೀಶ್ ರಿಂದ ನೇರ ನಾಮಿನೇಟ್ ಅಗಿರೋ ಚಂದನ್ ಆಚಾರ್, ಮನೆಯ ಸದಸ್ಯರಿಂದ ನಾಮಿನೇಟ್ ಆದ ಶೈನ್ ಶೆಟ್ಟಿ, ದೀಪಿಕಾ, ಭೂಮಿ ಶೆಟ್ಟಿ, ರಾಜು ತಾಳಿಕೋಟೆ ಮತ್ತು ಚೈತ್ರಾ ಕೋಟೂರು.

ಈ ಏಳು ಜನರಲ್ಲಿ ಒಬ್ಬೊಬ್ಬರದೇ ಪ್ಲಸ್ ಮತ್ತು ಮೈನಸ್ ಅಂಶಗಳು ಯಾವುವು ಅನ್ನೋದನ್ನ ನೋಡ್ತಾ ಹೋಗೋಣ. ಮೊದಲಿಗೆ ಪ್ರಿಯಾಂಕ ವಿಚಾರಕ್ಕೆ ಬಂದ್ರೆ, ನೇರ ನಾಮಿನೇಟ್ ಆದ ನಂತರ ಫುಲ್ ಅಲರ್ಟ್ ಆಗಿರೋ ಪ್ರಿಯಾಂಕ, ಇಡೀ ವಾರ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಸಿಕ್ಕ ಎಲ್ಲಾ ಅವಕಾಶಗಳನ್ನ ಬಳಸಿಕೊಳ್ತಿದ್ದಾರೆ. ಟಾಸ್ಕ್ಗಳಲ್ಲಿ ಆಕ್ಟೀವ್ ಆಗಿ ಪಾಲ್ಗೊಳುತ್ತಿದ್ದಾರೆ. ತನ್ನ ಟೀಂನವರನ್ನಷ್ಟೇ ಅಲ್ಲದೆ ಮನೆಯ ಇತರೆ ಸದಸ್ಯರ ಜೊತೆ ಮಾತಾಡೋಕ್ಕೆ ಶುರುಮಾಡಿದ್ದಾರೆ. ನಾನು ಇತರೆ ನಾಮಿನೇಟ್ ಆದ ಕಂಟೆಸ್ಟೆಂಟ್ ಗಳಿಗಿಂತ ಬೆಟರ್ ಅಲ್ವಾ ಅಂತ ನೇರವಾಗಿ ಕುರಿ ಪ್ರತಾಪ್ ಬಳಿ ಕೇಳಿದ್ರು ಪ್ರಿಯಾಂಕ. ಈ ವಿಚಾರಕ್ಕೆ ಬಂದ್ರೆ ಕೊನೆಯಲ್ಲಿ ಉಳಿಯೋ ಸದಸ್ಯರಿಗಿಂತ ಬೆಟರ್ ಅಂತ್ಲೇ ಹೇಳಬಹುದು. ಹಾಗಾಗಿ ಸದ್ಯಕ್ಕೆ ಎಲಿಮಿನೇಶನ್ ಝೋನ್ನಿಂದ ಸೇಫ್ ಆಗಿ ಮನೆಯಲ್ಲಿ ಉಳಿಯೋ ಸಾಧ್ಯತೆ ಹೆಚ್ಚು.

ಶೈನ್ ರ ಬಗ್ಗೆ ಹೇಳೋದಾದ್ರೆ, ಮನೆಯ ಸದಸ್ಯರಲ್ಲಿ ಯಾರು ಏನೇ ಹೇಳಿದ್ರೂ, ತನ್ನ ಟೀಂ ಜೊತೆಗಷ್ಟೇ ಅಲ್ಲದೆ, ಉಳಿದವರ ಜೊತೇನೂ ಮಾತಾಡ್ತಾ, ಬಹಳ ಆಕ್ಟೀವ್ ಆಗಿದ್ದಾರೆ. ನಾಮಿನೇಟ್ ಆಗಿದ್ದಕ್ಕೆ ಈಗಾಗ್ಲೇ ಹಲವು ಬಾರಿ ಅಸಮಧಾನ ತೋರ್ಪಡಿಸಿಕೊಂಡಿದ್ದಾರೆ ಶೈನ್ಶೆಟ್ಟಿ. ಮನೇಲಿ ಇನ್ನಷ್ಟು ವಾರ ಇರಬೇಕೆಂಬ ಹಂಬಲದಲ್ಲಿದ್ದಾರೆ. ಅದಕ್ಕಾಗಿ ಬಹಳ ಶ್ರಮ ಪಡ್ತಿದ್ದಾರೆ. ಈ ವಾರ ಶೈನ್ ಸೇಫ್ ಝೋನ್ ನಲ್ಲಿರೋ ಸಾಧ್ಯತೆ ಕಾಣ್ತಿದೆ.

ಮೂರು ವಾರಗಳಿಂದ ಮನೇಲಿದ್ರೂ, ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ದೀಪಿಕಾ ದಾಸ್ ಈ ವಾರ ನಾಮಿನೇಟ್ ಆದ್ರು. ಇದೇ ಟೈಂಗೆ ಅವರ ಪಾಲಿಗೆ ಅದೃಷ್ಟವಾಗಿ ಬಂದದ್ದು ರಣರಂಗ ಟಾಸ್ಕ್. ಈ ಟಾಸ್ಕ್ನಲ್ಲಿ ಅವರನ್ನ ಹರೀಶ್, ಸಪ್ತಾಶ್ವ ತಂಡ ನಾಯಕಿಯಾಗಿ ಆಯ್ಕೆ ಮಾಡಿದ್ರು. ಮಾಡು ಇಲ್ಲವೆ ಬಿಡು ಟಾಸ್ಕ್ನಲ್ಲಂತೂ ಸತತ ಎಂಟೂವರೆ ಗಂಟೆ ಕಾಲ ತ್ರಿಕೋನಾಕಾರದ ಪೆಟ್ಟಿಗೆ ಮೇಲೆ ಹಗ್ಗ ಹಿಡಿದು ನಿಂತು ತನ್ನ ತಂಡವನ್ನು ಗೆಲ್ಲಿಸಿಕೊಳ್ಳಲು ಹೋರಾಡಿದ್ದು ಅವರಿಗೆ ಪ್ಲಸ್ ಆಯ್ತು. ಇದ್ರ ಜೊತೆಗೆ ಮನೆಯ ಇತರ ಸದಸ್ಯರ ಜೊತೆ ಬೆರೆಯೋಕ್ಕೆ ಸಹ ಶುರುಮಾಡಿದ್ದಾರೆ. ದೀಪಿಕಾರ ಅಭಿಮಾನಿಗಳೆಲ್ಲಾ ವೋಟ್ ಹಾಕಿದ್ರೆ ಅವರು ಈ ವಾರ ಮನೆಯಲ್ಲಿಯೇ ಉಳಿಯೋ ಸಾಧ್ಯತೆ ಜಾಸ್ತಿ.

ಇನ್ನು ಭೂಮಿ ಶೆಟ್ಟಿ ವಿಚಾರಕ್ಕೆ ಬಂದ್ರೆ, ರಾಯಲ್ ಶೆಟ್ರು ಈ ವಾರದ ಟಾಸ್ಕ್ ದೀಪಿಕಾ ಜೊತೆಗೆ ವರವಾಗಿದ್ದು ಭೂಮಿ ಶೆಟ್ಟಿಗೆ. ಸಿಡಿಲು ತಂಡದ ಕ್ಯಾಪ್ಟನ್ ಆಗಿ ಮಾಡು ಇಲ್ಲವೇ ಬಿಡು ಟಾಸ್ಕ್ನಲ್ಲಿ ಎಂಟೂವರೆ ಗಂಟೆ ನಿಂತು ದೀಪಿಕಾಗೆ ಫೈಟ್ ಕೊಟ್ಟು ವಿಜೇತರಾಗಿದ್ದು, ಶೆಟ್ಟಿ ಪಾಲಿಗೆ ಪ್ಲಸ್. ಇನ್ನು ಚಾಕಲೇಟ್ ಕದ್ದಿದ್ದನ್ನೇ ನೆಪ ಮಾಡ್ಕೊಂಡು ತನ್ನನ್ನ ನಾಮಿನೇಟ್ ಮಾಡಿದ್ರ ಕೆಲವರ ಬಳಿ ನೇರವಾಗೇ ಬೇಸರ ತೋರ್ಪಡಿಸಿದ್ರು. ಮನೆಯ ಒಂದು ಟೀಂನ ಜೊತೆ ಗುರ್ತಿಸಿಕೊಂಡ್ರೂ, ಆಗಾಗ ಉಳಿದವರ ಜೊತೆಗೂ ಫ್ರೆಂಡ್ ಶಿಫ್ ಮಾಡ್ತಾ ಸೇಫ್ ಗೇಮ್ ಆಡ್ತಿದ್ದಾರೆ ಭೂಮಿ. ಸದ್ಯದ ಮಟ್ಟಿಗೆ ಅವ್ರಿಗೆ ರಿಸ್ಕ್ ಹೆಚ್ಚಾಗಿ ಕಾಣಿಸ್ತಿಲ್ಲ.

ನಾಮಿನೇಟ್ ಆಗ್ತಿದ್ದಂತೆ ಫುಲ್ ಆಕ್ಟೀವ್ ಆಗಿ, ಸೇಫ್ ಆದ ವಾರ ಫುಲ್ ಕೂಲ್ ಆಗಿದ್ದ ಚೈತ್ರಾ ಕೋಟೂರಿಗೆ ಈ ವಾರ ಮತ್ತೆ ರಿಸ್ಕ್ ಝೋನ್ ಗೆ ಬಂದು ನಿಲ್ಲುವಂತಾಯ್ತು. ಮನೆಯ ಸದಸ್ಯರ ಜೊತೆಗೆ ಕಳೆದ ವಾರ ಕಿಚ್ಚ ಸುದೀಪ್ ಹೇಳಿದಂತೆ ಚೈತ್ರಾ ಈ ವಾರ ನಾಮಿನೇಟ್ ಆಗ್ತಿದ್ದಂತೆ ಮತ್ತೆ ಶೈನ್ ಟೋಪಿ ಎತ್ಕೊಂಡು ಮಗು ಮಗು ಅಂತ ಓಡಾಡ್ತಿದ್ದಾರೆ. ಬೆಳಗ್ಗೆ ಬಿದ್ದ ಕನಸಿನ ಬಗ್ಗೆ ಹೇಳ್ತಿದ್ದಾರೆ, ಒಬ್ಬರೇ ಕೂತು ಅಳ್ತಿದ್ದಾರೆ, ಬೇರೆಯವರ ಡಿಸ್ಕಶನ್ ಗಳಲ್ಲಿ ಸ್ವಲ್ಪ ಜಾಸ್ತಿನೇ ಪಾಲ್ಗೊಳ್ತಿದ್ದಾರೆ. ಇದುವರೆಗಿನ ಟ್ರೆಂಡ್ ನೋಡಿದ್ರೆ ಚೈತ್ರಾ ಕೋಟೂರು ಸಹ ಸದ್ಯಕ್ಕೆ ಸೇಫ್ ಆಗಿಬಿಡಬಹುದಾದ ಸಾಧ್ಯತೆ ಕಾಣ್ತಿದೆ.

ಇನ್ನು ಉಳಿದವರು ರಾಜು ತಾಳಿಕೋಟೆ ಮತ್ತು ಚಂದನ್ ಆಚಾರ್. ಈ ವಾರದ ಕೊನೆಗೆ ರಿಸ್ಕ್ ಝೋನ್ನಲ್ಲಿರೋವ್ರು ಇವರಿಬ್ಬರೇ. ಚಂದನ್ ಆಚಾರ್ ಕಳೆದೆರಡು ವಾರ ಅಂತಿಮ ಹಂತದವರೆಗೂ ಹೋಗಿ ಕೊನೆ ಕ್ಷಣದಲ್ಲಿ ಎಲಿಮಿನೇಶನ್ ನಿಂದ ಬಚಾವ್ ಆದವ್ರು. ಆದ್ರೆ ಈ ವಾರ ಅದೇ ಚಾನ್ಸ್ ಮರುಕಳಿಸೋದು ಅಷ್ಟು ಸುಲಭವಲ್ಲ. ಯಾಕಂದ್ರೆ, ಇದೇ ವಿಚಾರದಲ್ಲಿ ಅವರಷ್ಟೇ ಟಫ್ ಕಾಂಪಿಟೇಟ್ ಮಾಡ್ತಿರೋವ್ರು ರಾಜು ತಾಳಿಕೋಟೆ. ಸೀರಿಯಸ್ ನೆಸ್ ಇಲ್ಲ ಅನ್ನೋ ಕಾರಣಕ್ಕೆ 2 ನೇ ಬಾರಿಗೆ ಮನೆಯಿಂದ ನಾಮಿನೇಟ್ ಆದವ್ರು ರಾಜು ತಾಳಿಕೋಟೆ. ಈ ಬಾರಿ ನಾಮಿನೇಟ್ ಆಗ್ತಿದ್ದಂತೆ ಆರ್ಭಟಿಸಿದ್ದ ರಾಜು ತಾಳಿಕೋಟೆ, ಈ ಸಲ ವಾರ್ ಗ್ಯಾರಂಟಿ ಅಂದಿದ್ರು. ಆದ್ರೆ ಅವರದ್ದು ಕೇವಲ ತೋರ್ಪಡಿಕೆಯ ವಾರ್ ಆಯಿತೇ ಹೊರತು. ಸೀರಿಯಸ್ ಆಗಿ ಅವರು ಆಕ್ಟೀವ್ ಆಗಿ ಟಾಸ್ಕ್ ಗಳಲ್ಲಿ ಪಾಲ್ಗೊಳಲಿಲ್ಲ. ಇದರ ಬಗ್ಗೆ ಅವರ ತಂಡದ ಸದಸ್ಯರೇ ಮಾತಾಡಿಕೊಳ್ಳುವಂತಾಯ್ತು. ಮಾಡು ಇಲ್ಲವೇ ಬಿಡು ಟಾಸ್ಕ್ ನಲ್ಲೂ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ರಾಜು ತಾಳಿಕೋಟೆಗೆ ಸಾಧ್ಯವಾಗಲಿಲ್ಲ.

ನಮ್ಮ ಅನಾಲಿಸಿಸ್ ಪ್ರಕಾರ ನೋಡೋದಾದ್ರೆ ಮನೆಯಿಂದ ಹೊರಹೋಗಲು ರಾಜು ತಾಳಿಕೋಟೆ ಮತ್ತು ಚಂದನ್ ಆಚಾರ್ ನಡುವೆ ಟಫ್ ಕಾಂಪಿಟೇಶನ್ ಇದೆ. ಇಬ್ಬರಲ್ಲಿ ಚಂದನ್ಗೆ ಈ ಬಾರಿಯೂ ಅಂತಿಮ ಹಂತದಲ್ಲಿ ಸೇಫ್ ಆಗಿಬಿಡಬಹುದಾದ ಸಾಧ್ಯತೆಗಳು ಕಾಣ್ತಿವೆ.

ಈ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗೋರು ಯಾರು ಅನ್ನೋದು ಬಹಳ ಇಂಟರೆಸ್ಟಿಂಗ್ ವಿಚಾರ. ಯಾಕಂದ್ರೆ ಕಳೆದ ಮೂರು ಎಲಿಮಿನೇಶನ್ ಗಳಿಗೆ ಹೋಲಿಸಿದ್ರೆ, ಈ ವಾರದ್ದು ಸ್ವಲ್ಪ ಡಿಫರೆಂಟ್. ಇದೇ ಮೊದಲ ಬಾರಿಗೆ 7 ಜನ ಸ್ಪರ್ಧಿಗಳು ಎಲಿಮಿನೇಶನ್ ರಿಸ್ಕ್ ಝೋನ್ ಗೆ ಬಂದು ನಿಂತಿದ್ದಾರೆ. 7 ಜನರಲ್ಲಿ ಔಟ್ ಆಗೋ ಕಂಟೆಸ್ಟೆಂಟ್ ಯಾರು ಮತ್ತು ಯಾಕೆ ಅನ್ನೋದನ್ನ ಅನಾಲಿಸಿಸ್ ಸಮೇತ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *