ಬಿಗ್ ಬ್ರೇಕಿಂಗ್ : ಬ್ಯಾನ್ ಆಗಲಿದೆ 2000 ನೋಟು.
ಈ ವಿಚಾರದಲ್ಲಿ ಇದುವರೆಗೂ ಹಲವಾರು ಊಹಾಪೋಹಗಳು ಬಂದಿರಬಹುದು. ಆದ್ರೆ ಇದು ಮಾತ್ರ ಪಕ್ಕಾ ಮಾಹಿತಿ… ಇದೀಗ 2 ಸಾವಿರ ರೂಪಾಯಿ ನೋಟು ಬ್ಯಾನ್ ಆಗಲಿದೆ. ಇನ್ನು ಮುಂದೆ ಬ್ಯಾಂಕ್ ಮತ್ತು ಎಟಿಎಂ ಗಳಲ್ಲಿ ನಿಮಗೆ 2 ಸಾವಿರ ನೋಟು ಸಿಗೋದಿಲ್ಲ. ಈಗಾಗಲೇ ಜನರ ಬಳಿ ಇರುವ ನೋಟುಗಳನ್ನು ಬ್ಯಾಂಕುಗಳಲ್ಲಿ ತೆಗೆದುಕೊಳ್ಳಲಾಗುತ್ತೆ. ಆದರೆ ಅದನ್ನ ಮರುಬಳಕೆ ಮಾಡುವಂತಿಲ್ಲ. ಫೆಬ್ರವರಿ 7 ರಿಂದಲೇ 2 ಸಾವಿರ ನೋಟ್ ಮರು ಚಲಾವಣೆ ಮಾಡದಂತೆ ಈಗಾಗಲೇ ಕೆಲ ಬ್ಯಾಂಕುಗಳಿಗೆ ಆರ್ ಬಿಐ ನಿಂದ ಸರ್ಕ್ಯುಲರ್ ಕಳುಹಿಸಿದ್ದು, ಇದನ್ನ ಎಲ್ಲಾ ಬ್ಯಾಂಕುಗಳಿಗೂ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ 3 ವರ್ಷಗಳ ಹಿಂದೆ ಕಾಳಧನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ 500 ಮತ್ತು 1000 ನೋಟುಗಳನ್ನು ಬ್ಯಾನ್ ಮಾಡಿದ ನಂತರ 2 ಸಾವಿರ ರೂಪಾಯಿ ನೋಟುಗಳು ಚಲಾವಣೆಗೆ ಬಂದಿದ್ದವು. ಇದೀಗ 2000 ರೂಪಾಯಿ ನೋಟುಗಳನ್ನ ಕಾಳಧನಿಕರು ಭಾರಿ ಪ್ರಮಾಣದಲ್ಲಿ ದಾಸ್ತಾನು ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಇದೀಗ 2 ಸಾವಿರ ನೋಟುಗಳ ಚಲಾವಣೆ ನಿಲ್ಲಿಸಲು ಮುಂದಾಗಿದೆ. ಅದಕ್ಕಾಗಿ ಈಗಾಗಲೇ ಆರ್ ಬಿಐ 2 ಸಾವಿರ ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಇನ್ನು ಜನರ ಬಳಿಯಿರುವ ನೋಟುಗಳನ್ನು ಬ್ಯಾಂಕುಗಳಲ್ಲಿ ತೆಗೆದುಕೊಂಡು, ನಂತರ ಅವುಗಳ ಮರುಬಳಕೆ ಆಗದಂತೆ ತಡೆಯಲಾಗುತ್ತದೆ.